ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬುಧಾಬಿ ಮಂದಿರ ಉದ್ಘಾಟನೆಗೊಂಡಿದೆ. ನನಗೆ ಸ್ವಾಮೀಜಿ ಪೂಜಾರಿ ಎಂದು ಹೇಳಿದರು. ಈ ಮಾತು ನನಗೆ ಮತ್ತಷ್ಟು ಹೆಮ್ಮೆ ತಂದಿದೆ. ನಾನು ಮಂದಿರದ ಪೂಜಾರಿಯಾಗುವ ಯೋಗ್ಯತೆ, ಗೌರವ ಹೊಂದಿದ್ದೇನೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ನಾನು ಭಾರತ ಮಾತೆಯ ಪೂಜಾರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಹಿಂದೂ ದೇವಸ್ಥಾನವನ್ನು ಉದ್ಘಾಟಿಸಿದ ಬಳಿಕ ಮಂದಿರ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,. ಮಾನವೀಯತೆ ಜಗತ್ತಿನಲ್ಲಿ ಒಂದು ಸ್ವರ್ಣಮಯ ಅಧ್ಯಾಯ ಬರೆಯಲಾಗಿದೆ. ಅಬುಧಾಬಿಯಲ್ಲಿ ಭವ್ಯ ಮಂದಿರ ಲೋಕಾರ್ಪಣೆಯಾಗಿದೆ. ಇದರ ಹಿಂದೆ ಹಲವು ವರ್ಷಗಳ ಪರಿಶ್ರಮವಿದೆ. ಇದರ ಹಿಂದೆ ವರ್ಷಗಳ ಹಿಂದಿನ ಕನಸಿದೆ. ಭಗವಾನ್ ಸ್ವಾಮಿ ನಾರಾಯಣನ ಆಶೀರ್ವಾದ ಈ ದೇವಸ್ಥಾನದ ಮೇಲಿದೆ ಎಂದು ಹೇಳಿದ್ದಾರೆ.
ನನಗೆ ಇಲ್ಲಿನ ಸ್ವಾಮಿಜಿಗಳ ಆಶೀರ್ವಾದ, ಮಾರ್ಗದರ್ಶನ ಹಲವು ವರ್ಷಗಳಿಂದ ಸಿಗುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ಪ್ರಧಾನಿಯಾಗಿದ್ದಾಗಲೂ ಯಾವುದು ಸರಿ ಎನಿಸಿದ್ದನ್ನೂ , ತಪ್ಪು ಎನಿಸಿದ್ದನ್ನೂ ನನಗೆ ಸ್ಪಷ್ಟ ಶಬ್ಧಗಳಲ್ಲಿ ಹೇಳುತ್ತಿದ್ದಾರೆ. ಅವರ ಮಾರ್ಗದರ್ಶನ ನನಗೆ ಸದಾ ಸಿಗುತ್ತಿದೆ. ದೆಹಲಿಯಲ್ಲಿ ಲೋಟಸ್ ಮಂದಿರ ಶಿಲನ್ಯಾಸವಾದಾಗ, ನಾನು ರಾಜನೀತಿಯಲ್ಲಿ ಇರಲಿಲ್ಲ. ಆದರೆ ಗುರೂಜಿಗಳ ಮಾರ್ಗದರ್ಶನದ ಮೂಲಕ ಮಂದಿರ ನಿರ್ಮಾಣವಾಗಿತ್ತು. ಇದೀಗ ಅವರ ಕನಸನ್ನು ನಾವೆಲ್ಲಾ ಸೇರಿ ಅಬುಧಾಬಿಯಲ್ಲಿ ಪೂರ್ಣಗೊಳಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಈ ಮಂದಿರ ಇಲ್ಲಿ ನಿರ್ಮಾಣವಾಗಲು ಅತೀ ದೊಡ್ಡ ಕೊಡುಗೆ ಎಂದರೆ ಅದು ಇಲ್ಲಿನ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜ್ಯಾಯದ್ ಅವರಿಗೆ ಸಲ್ಲಬೇಕು . ಮೊಹಮ್ಮದ್ ಶೇಕ್ ಕೇವಲ ಅಬುಧಾಬಿಯಲ್ಲಿನ ಹಿಂದುಗಳ ಮಾತ್ರವಲ್ಲ, 140 ಕೋಟಿ ಭಾರತೀಯರ ಮನಸ್ಸು ಗೆದ್ದಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಈ ಮಂದಿರಕ್ಕೆ ಸ್ಥಳ ನೀಡಿದ್ದರಿಂದ ಹಿಡಿದು, ಶಿಲನ್ಯಾಸ, ನಿರ್ಮಾಣ, ಉದ್ಘಾಟನೆವರೆಗೆ ಪ್ರತಿ ಹಂತದಲ್ಲಿಶೇಕ್ ಮೊಹಮ್ಮದ್ ನೆರವು ನೀಡಿದ್ದಾರೆ. ನಾನು 2017ರಲ್ಲಿ ಶೇಕ್ ಮೊಹಮ್ಮದ್ ಭೇಟಿಯಾದಾಗ ಈ ಮಂದಿರ ಕುರಿತು ಚರ್ಚೆ ನಡೆಸಿದ್ದೆ. ಈ ವೇಳೆ ಅತೀ ಕಡಿಮೆ ಸಮಯದಲ್ಲಿ ಭೂಮಿ ನೀಡಿದರು. 2018ರಲ್ಲಿ ಆಗಮಿಸಿದಾಗ ಎರಡು ಹಿಂದೂ ದೇಗಲದ ಮಾಡೆಲ್ ಇತ್ತು. ಈ ಮಾಡೆಲ್ ಅಬುಧಾಬಿ ಸರ್ಕಾರ ಅಂಗೀಕರಿಸಿದ ಮಾಡೆಲ್ ನಿರ್ಮಾಣವಾಗಲಿದೆ ಎಂದು ಸಮಿತಿ ಹೇಳಿತ್ತು. ಈ ಮಾಡೆಲ್ ಸರ್ಕಾರದ ಮುಂದೆ ಬಂದಾಗ, ಶೇಕ್ ಮೊಹಮ್ಮದ್ ಒಂದು ಮಾತು ಹೇಳಿದ್ದರು. ಈ ಹಿಂದೂ ಮಂದಿರ ಅತ್ಯಂತ ಭವ್ಯ ಹಾಗೂ ಪವಿತ್ರ ಹಿಂದೂ ಮಂದಿರವಾಗಬೇಕು ಎಂದು ಒತ್ತಿ ಹೇಳಿದರು. ಇದು ಶೇಕ್ ಮೊಹಮ್ಮದ್ ಅವರ ವಿಶಾಲ ಯೋಚನೆಯ ರೀತಿ ಎಂದು ಮೋದಿ ಹೇಳಿದರು.
ಹೇಳಿದ್ದಾರೆ.