ಪ್ರಧಾನಿ ಮೋದಿ ಮಂದಿರ ಉದ್ಘಾಟಕರಾಗಿ ಬಂದಿಲ್ಲ, ಪೂಜಾರಿಯಾಗಿ ಆಗಮನ: ಸ್ವಾಮೀಜಿ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಬುಧಾಬಿಯಲ್ಲಿ ಮೊದಲ ಹಿಂದು ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದ್ದಾರೆ.

ಮಂದಿರದಲ್ಲಿ ಮೋದಿ ನೇರವೆರಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಅತ್ಯಂತ ಶ್ರದ್ಧಾ ಪೂರ್ಕವಾಗಿ, ಭಕ್ತಿ ಪೂರ್ವಕಾಗಿ ಹಾಗೂ ಅತ್ಯಂತ ಪಾವಿತ್ರ್ಯತೆಯಿಂದ ನೇರವೇರಿಸಿದ್ದಾರೆ.

ಈ ವೇಳೆ ಮಾತನಾಡಿದ ಬಾಪ್ಸ್ ಮಂದಿರದ ಸ್ವಾಮೀಜಿ ಮಹರಾಜ್ , ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರದಲ್ಲಿ ಮೂರ್ತಿಗಳಿಗೆ ನೆರವೇರಿಸಿದ ಪೂಜೆ, ಧಾರ್ಮಿಕ ವಿಧಿವಿಧಾನಗಳನ್ನು ಹತ್ತಿರದಿಂದ ನಾನು ನೋಡಿದ್ದೇನೆ. ಮೋದಿ ನೋಡಿದರೆ, ಅವರು ಈ ಮಂದಿರ ಉದ್ಘಾಟನೆ ಮಾಡಲು ಬಂದಿಲ್ಲ, ಈ ಮಂದಿರ ಪೂಜಾರಿಯಾಗಿ ಬಂದಿದ್ದಾರೆ ಎಂದು ಹೇಳಿದ್ದಾರೆ.

ಮೋದಿಯಂತ ನಾಯಕ ವಿಶ್ವಕ್ಕೆ ಅಗತ್ಯವಿದೆ. ನಮ್ಮ ದೇಶದ ಸಂಸ್ಕೃತಿಯ ಪ್ರತೀಕ, ನಮ್ಮ ಪರಂಪರೆ, ಸನಾತನದ ಪ್ರತಿನಿಧಿಯಾಗಲು ಯಾರಾದೊಬ್ಬ ನಾಯಕನಿದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಸ್ವಾಮೀಜಿ ಹೇಳಿದ್ದಾರೆ.

ಅಬುಧಾಬಿ ಮಂದಿರದ ಉದ್ಘಾಟನೆ ಮಾತ್ರವಲ್ಲ, ಈ ಮಂದಿರ ಪ್ರತಿ ಹಂತದಲ್ಲೂ ಮೋದಿ ಭಾಗವಾಗಿದ್ದಾರೆ. ಶಿಲನ್ಯಾಸಕ್ಕೂ ಮೊದಲು ಮೋದಿಯ ನೆರವು, ಸಹಾಯ ಅನನ್ಯ ಎಂದು ಸ್ವಾಮೀಜಿ ಹೇಳಿದ್ದಾರೆ.

ಒಂದು ದೇವಸ್ಥಾನ ನಿರ್ಮಿಸಿದರೆ ಅದು ವಸುಧೈವಕುಟುಂಬಕಂ ರೀತಿ ಇರಬೇಕು ಎಂದು ಮೋದಿ ಸೂಚಿಸಿದ್ದರು. ಈ ಮೂಲಕ ಕೇವಲ ಹಿಂದು ಸಮುದಾಯ ಮಾತ್ರವಲ್ಲ, ಜಗತ್ತನ್ನೇ ಒಂದು ಕುಟುಂಬವಾಗಿ ನೋಡುವ ಮೋದಿ ಕಲ್ಪನೆ, ಸನಾತನ ಧರ್ಮದ ಸಂಕೇತ ಸೂಚನೆ ನೀಡಿದ್ದಾರೆ. ರಾತ್ರಿ 12 ಗಂಟೆಗೂ ನನಗೆ ಕರೆ ಮಾಡಿ ಮಂದಿರ ಕೆಲಸ ಹೇಗೆ ನಡೆಯುತ್ತಿದೆ, ಯಾವ ಕಾಮಾಗಾರಿ ಎಲ್ಲೀವರೆಗೆ ಆಗಿದೆ ಎಂದು ವರದಿ ಕೇಳುತ್ತಿದ್ದರು. ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ ನಮ್ಮ ಸಂಸ್ಕೃತಿ, ದೇವಸ್ಥಾನದ ಕುರಿತು ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಸ್ವಾಮೀಜಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!