ಚಾಮರಾಜನಗರದಲ್ಲಿ ಈ ಬಾರಿ ಗೆಲ್ಲುವ ವಿಶ್ವಾಸ ನನಗಿದೆ: ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್

ಹೊಸದಿಗಂತ ವರದಿ,ಮೈಸೂರು :

ನನಗೆ ಮೂರು ಪಕ್ಷಗಳಲ್ಲೂ ಮಿತ್ರರಿದ್ದಾರೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಮಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿ ಕೇಂದ್ರಸ್ವಾಮಿಯವರಿoದ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದ ೩೧ ವರ್ಷಗಳ ಅನುಭವದ ಕೇವಲ ಮೂರು ವರ್ಷಗಳು ಮಾತ್ರ ಅಧಿಕಾರ ಅನುಭವಿಸಿದ್ದು, ೨೦೦೪ ರಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಿ ಶಾಸಕನಾಗಿದ್ದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹಲವು ಪಕ್ಷಕ್ಕೆ ಹೋಗಿ ಬಂದಾಯ್ತು. ನಾನು ಅಂದಿನಿoದ ಇಲ್ಲಿವರೆಗೂ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಬಂದಿದ್ದೇನೆ. ೨೦ ವರ್ಷಗಳ ಬಳಿಕ ಒಂದು ಅವಕಾಶ ಸಿಕ್ಕಿದೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ.ಹಾಲಿ ಸಂಸದರಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದರೂ, ಅವರು ಬಿಜೆಪಿಯಲ್ಲೇ ಇದ್ದು ನನಗೆ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅವರ ಆಶೀರ್ವಾದ ನನ್ನ ಮೇಲೆ ಇರುತ್ತೆ ಎಂಬ ವಿಶ್ವಾಸ ಇದೆ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದಿದ್ದರೂ ಬಿಜೆಪಿಗೆ ತನ್ನದೇ ಆದ ಹಿಡಿತ ಮತ್ತು ಸಾಂಪ್ರದಾಯಿಕ ಮತಗಳಿ ಇವೆ. ಜೊತೆಗೆ ನನಗೆ ದಿವಂಗತ ಆರ್. ಧ್ರುವನಾರಾಯಣ್ ಬೆಂಬಲಿಗರು, ಶ್ರೀನಿವಾಸ್ ಪ್ರಸಾದ್ ಬೆಂಬಲಿಗರು ಎಲ್ಲರು ನನ್ನನ್ನೂ ಬೆಂಬಲಿಸುತ್ತಾರೆ ಎನ್ನು ಭರವಸೆಯಿದೆ. ೨೦ ವರ್ಷಗಳ ವನವಾಸದಿಂದ ನನಗೆ ಮುಕ್ತಿ ಸಿಗುವ ವಿಶ್ವಾಸ ಇದೆ. ಟಿಕೆಟ್ ಸಿಗಲು ಇಂತಹವರೇ ಸಹಕಾರ ಹೆಚ್ಚು ಅಂತ ನಾನು ಹೇಳಲಾರೆ ಪಕ್ಷ ನನ್ನನ್ನ ಗುರ್ತಿಸಿ ಟಿಕೆಟ್ ಕೊಟ್ಟಿದೆ. ಕ್ಷೇತ್ರದಲ್ಲಿ ಗೆದ್ದು ಬರುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!