Monday, September 26, 2022

Latest Posts

ನಾನು ರಾಗಿ ಕಳ್ಳ ಅಲ್ಲ: ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಬಿಜೆಪಿ ಮುಖಂಡರು ತನ್ನ ಮೇಲೆ ಮಾಡಿರುವ ರಾಗಿ ಕಳ್ಳ ಆರೋಪದ ಬಗ್ಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಆಣೆ ಪ್ರಮಾಣ ಮಾಡಿದ್ದೇನೆ ಆರೋಪ ಮಾಡಿದವರು ಶ್ರೀಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಅರಸೀಕೆರೆಯ ಜೆ.ಡಿ.ಎಸ್. ಶಾಸಕ ಶಿವಲಿಂಗೇ ಗೌಡ ಹೇಳಿದ್ದಾರೆ.

ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದರು
ಬಿಜೆಪಿ ಮುಖಂಡರುಗಳು ತಮ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂಬ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದೆನೆ ಎಂದ ಅವರು ಆರೋಪ ಮಾಡಿದವರೂ ಶ್ರೀ ಸ್ವಾಮಿಯವರ ಮುಂದೆ ಬಂದು ಪ್ರಮಾಣ ಮಾಡಲಿ ಅಥವಾ ದಾಖಲೆಗಳನ್ನು ಬಿಡುಗಡೆ ಮಾಡಲಿ. ದಾಖಲೆಗಳನ್ನು ನೀಡಿದರೆ ಕಾನೂನು ರೀತಿಯ ಹೋರಾಟಕ್ಕೂ ತಾವು ಸಿದ್ದರಿರುವುದಾಗಿ ಅವರು ತಿಳಿಸಿದರು.

ಬಿಜೆಪಿ ಮುಖಂಡರು ಸಾರ್ವಜನಿಕವಾಗಿ ರಾಗಿ ಕಳ್ಳ ಎಂದು ಆರೋಪ ಮಾಡಿದ್ದಾರೆ ಆಗಲೇ ಅವರಿಗೆ ದಾಖಲೆಗಳನ್ನು ನೀಡಿ ಅಥವಾ ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬನ್ನಿ ಎಂದು ಹೇಳಿದ್ದೆ ಆದರೆ ಆರೋಪ ಮಾಡಿದವರು ಯಾವುದಕ್ಕೂ ಬರಲಿಲ್ಲ ಅದರಿಂದ ತಾನೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಾನು ಒಂದು ಕೆ.ಜಿ ರಾಗಿಯನ್ನೂ ಕದ್ದಿಲ್ಲ ನಾನು ರಾಗಿ ಕಳ್ಳ ಅಲ್ಲ ಎಂದು ಪ್ರಮಾಣ ಮಾಡಿರುವುದಾಗಿ ತಿಳಿಸಿದರು.
ಜನಪ್ರತಿನಿಧಿಗಳ ಬಗ್ಗೆ ಇಷ್ಷೊಂದು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಮಾತುಗಳಿಗೆ ಕಡಿವಾಣಹಾಕಬೇಕಾದ ಅಗತ್ಯವಿದೆ ರಾಜಕೀಯ ಮಾಡುವವರು ಗೌರವಯುತವಾಗಿ ರಾಜಕೀಯ ಮಾಡಬೇಕು ಕೊಳಕು ರಾಜಕೀಯಕ್ಕೆ ಇಳಿಯಬಾರದು ಅದಕ್ಕಾಗಿ ಇಲ್ಲಿಗೆ ಬಂದು ಪ್ರಮಾಣ ಮಾಡಿದ್ದೇನೆ ಎಂದರು.

ತನ್ನ ಕ್ಷೇತ್ರದಲ್ಲಿ ಅಶಾಂತಿ ನಿರ್ಮಾಣವಾಗಿದ್ದು ಈ ಅಶಾಂತಿ ಶಮನವಾಗಿ ನೆಮ್ಮದಿ ನೆಲೆಸಲಿ ಎಂದು ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.

ಶಂಕರಲಿಂಗೇಗೌಡ ಅವರು ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಾ ಹೆಗ್ಗಡೆಯರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!