ಸೋಮವಾರಪೇಟೆಯ ಸೂರ್ಲಬ್ಬಿಯಲ್ಲಿ ಗುಂಡೇಟಿಗೆ ವ್ಯಕ್ತಿ ಬಲಿ

ಹೊಸದಿಗಂತ ವರದಿ, ಸೋಮವಾರಪೇಟೆ:

ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಗುಂಡೇಟಿಗೆ ಬಲಿಯಾಗಿರುವ ಘಟನೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ.
ಯಡವಾರೆ ಗ್ರಾಮದ ಶಿವಕುಮಾರ್(58)ಎಂಬವರೇ ಮೃತಪಟ್ಟರು.
ಭಾನುವಾರ ಸಂಜೆ ತನ್ನ ನಾಲ್ಕು ಜನ ಸ್ನೇಹಿತರೊಡನೆ ಸೂಲಬ್ಬಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ ಅವರಿಗೆ ಬೆಳಗ್ಗೆ ಮಗ ಫೊನ್ ಮಾಡಿದ್ದರೂ ಕರೆ ಸ್ವೀಕರಿಸಿರಲಿಲ್ಲ.
ನಂತರ ಜೊತೆಯಲ್ಲಿದ್ದವರು ಕರೆ ಸ್ವೀಕರಿಸಿ ನಿಮ್ಮ ತಂದೆ ಬಿದ್ದು ಸ್ವಲ್ಪ ಏಟಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರೆನ್ನಲಾಗಿದೆ. ಸಂಜೆಯ ವೇಳೆಗೆ ಅವರಿಗೆ ಗುಂಡೇಟು ಬಿದ್ದಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಘಟನೆ ನಡೆದಿದ್ದು, ಕುತ್ತಿಗೆ ಭಾಗಕ್ಕೆ ಗುಂಡೇಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಬೇಟೆಗೆ ತೆರಳಿದ ಸಂದರ್ಭ ಘಟನೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತದೇಹವನ್ನು ಸೋಮವಾರಪೇಟೆ ಶವಾಗಾರಕ್ಕೆ ತರಲಾಗಿದ್ದು ಡಿ.ವೈ.ಎಸ್.ಪಿ. ಗಂಗಾಧರಯ್ಯ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!