ಈ ಸಿನಿಮಾದಲ್ಲಿಯೂ ನಾನು ನಟಿಸುತ್ತಿಲ್ಲ, ರಮ್ಯಾ ಯಾವ ಸಿನಿಮಾ ಬಗ್ಗೆ ಮಾತಾಡ್ತಿದ್ದಾರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಇದೀಗ ಕಂಬ್ಯಾಕ್ ಮಾಡಿದ್ದಾರೆ. ಎಲ್ಲ ಕನ್ನಡ ಸಿನಿಮಾಗಳನ್ನು ವೀಕ್ಷಿಸಿ ವಿಮರ್ಶೆ ಮಾಡ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ ಮತ್ತೆ ಬಣ್ಣ ಕೂಡ ಹಚ್ತಿದ್ದಾರೆ. ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ರಾಜ್‌ಬಿ ಶೆಟ್ಟಿ ಜೊತೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಕಂ ಬ್ಯಾಕ್ ಮಾಡುವುದಾಗಿ ರಮ್ಯಾ ಹೇಳಿದ್ದರು. ಆದರೆ ಸ್ವಲ್ಪ ಸಮಯದ ನಂತರ ನಾನು ಆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.

ಇದೀಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟೀಂ ಜೊತೆ ರಮ್ಯಾ ಆನ್‌ಸ್ಕ್ರಿನ್‌ನಲ್ಲಿ ಕಾಣಿಸಿದ್ದಾರೆ. ರಮ್ಯಾ ಹೊಸಬರ ಚಿತ್ರದಿಂದ ಕಂಬ್ಯಾಕ್ ಮಾಡ್ತಿರೋದಕ್ಕೆ ಅಭಿಮಾನಿಗಳು ಆಶ್ಚರ್ಯಪಟ್ಟಿದ್ದರು. ಆದರೆ ರಮ್ಯಾ ಆ ಸಿನಿಮಾದಲ್ಲಿಯೂ ನಾನಿಲ್ಲ. ಪ್ರಮೋಷನಲ್ ವಿಡಿಯೋಗೆ ಕೈ ಜೋಡಿಸಿದ್ದೆ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಡಾಲಿ ಧನಂಜಯ್ ಅಭಿನಯದ ಉತ್ತರಾಖಂಡದ ಮೂಲಕ ರಮ್ಯಾ ಕಂಬ್ಯಾಕ್ ಮಾಡ್ತಾರೆ ಅನ್ನೋ ಗುಸುಗುಸು ಇದ್ದು, ರಮ್ಯಾ ಇದಕ್ಕೆ ಸ್ಪಷ್ಟನೆ ನೀಡಿಲ್ಲ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!