ನಾನು ಟೆಸ್ಟ್ ನಾಯಕನಾಗಲು ಸಿದ್ಧ: ಜಸ್ಪ್ರೀತ್ ಬುಮ್ರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅವಕಾಶ ಕೊಟ್ಟರೆ ಟೆಸ್ಟ್ ನಾಯಕತ್ವದ ಜವಾಬ್ದಾರಿ ನಿರ್ವಹಿಸುವೆ ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ.
ಇತ್ತೀಚೆಗೆ ಭಾರತ ಟೆಸ್ಟ್ ನಾಯಕತ್ವದಿಂದ ಕೆಳಗಿದ ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾದ ಟೆಸ್ಟ್ ನಾಯಕ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಲ್ಲರನ್ನು ಕಾಡಿದೆ.
ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕತ್ವ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಮದ್ಯೆ ಸೋಮವಾರ ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್ ನಾಯಕನಾಗಲು ಸಿದ್ಧ ಎಂದು ಹೇಳಿದದ್ದಾರೆ.
ಏಕದಿನ ಸರಣಿಗೆ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾಯಕತ್ವದ ಜವಾಬ್ದಾರಿಯನ್ನು ನೀಡಿದರೆ ಅದಕ್ಕೆ ನಾನು ಸಂಪೂರ್ಣವಾಗಿ ಸಿದ್ಧ ಎಂದು ಹೇಳಿದ್ದಾರೆ.
‘ನನಗೆ ಯಾವುದೇ ಜವಾಬ್ದಾರಿ ಸಿಕ್ಕರೂ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ. ಅವಕಾಶ ಸಿಕ್ಕರೆ ಅದೊಂದು ಗೌರವದಂತೆ. ಯಾವುದೇ ಪಾತ್ರವಾಗಿದ್ದರೂ ಯಾವುದೇ ಸಂದರ್ಭದಲ್ಲಿ ನಾನು ಕೊಡುಗೆ ನೀಡಲು ಬಯಸುತ್ತೇನೆ ಎಂದರು.
ಕೊಹ್ಲಿ ನಿರ್ಧಾರ ವೈಯಕ್ತಿಕ
ಪಂದ್ಯದ ನಂತರ ಟೀಮ್ ಮೀಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸುವುದಾಗಿ ಎಲ್ಲಾ ಆಟಗಾರರಿಗೆ ಹೇಳಿದ್ದರು ಎಂದು ಬುಮ್ರಾ ಹೇಳಿದ್ದಾರೆ. ಇದು ಅವರ ವೈಯಕ್ತಿಕ ನಿರ್ಧಾರವಾಗಿತ್ತು. ಅವರ ದೇಹ ಎಷ್ಟು ಸದೃಢವಾಗಿದೆ ಮತ್ತು ಮಾನಸಿಕವಾಗಿ ಎಷ್ಟು ಸಿದ್ಧವಾಗಿದೆ ಎಂಬುದು ಅವರಿಗೆ ತಿಳಿದಿದೆ. ವಿರಾಟ್ ಅವರ ಅತ್ಯುತ್ತಮ ಕೊಡುಗೆಗಾಗಿ ಎಲ್ಲಾ ಆಟಗಾರರು ಅಭಿನಂದಿಸಿದ್ದಾರೆ. ತಂಡಕ್ಕೆ ಹೊಸ ಫಿಟ್ನೆಸ್ ಸಂಸ್ಕೃತಿ ತಂದರು. ಎಲ್ಲರೂ ಅವರ ನಾಯಕತ್ವವನ್ನು ಕಬ್ಬಿಣ ಎಂದು ಪರಿಗಣಿಸುತ್ತಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!