November 20, 2026
Friday, November 20, 2026
spot_img

ನಾನೇ ಸರ್ಕಾರ, ನಾನು ಹೇಳಿದ್ದೇ ಫೈನಲ್‌ : ಹಾಸನದಲ್ಲಿ ಗರಂ ಆದ ಶಿವಲಿಂಗೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸನಾಂಬ ಜಾತ್ರೆಯಲ್ಲಿ ನೂರು ರೂಪಾಯಿಗೆ ಎರಡು ಲಡ್ಡುಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ಧ ಸಚಿವ ಕೆ.ಎಂ ಶಿವಲಿಂಗೇಗೌಡ ಗರಂ ಆಗಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಿಯ ದರುಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ಪ್ರಸಾದವಾಗಿ ನೀಡುವ ಲಡ್ಡುವಿನ ದರವನ್ನು ನೂರು ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಜಿಲ್ಲಾಡಳಿತ ಹಾಗೂ ದೇವಾಲಯದ ಅಧಿಕಾರಿಗಳ ನಿರ್ಧಾರಕ್ಕೆ ಶಿವಲಿಂಗೇಗೌಡ ವಿರೋಧ ವ್ಯಕ್ತಪಡಿಸಿದ್ದು, ಲಡ್ಡು ಬೆಲೆಯನ್ನು 60 ರೂಪಾಯಿಗೆ ಇಳಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಈ ವೇಳೆ 60 ರೂಪಾಯಿಗೆ ಎರಡು ಲಡ್ಡು ಕೊಡಬೇಕು. ಅದೇ ಸರಿ. ನಾನೇ ಸರ್ಕಾರ ನಾನು ಹೇಳಿದಮೇಲೆ ಫೈನಲ್‌ ಎಂದು ಸಿಟ್ಟಾಗಿದ್ದಾರೆ. ದೇವಾಲಯದ ಸುತ್ತಮುತ್ತ ಪರಿಶೀಲನೆ ವೇಳೆ ನೂರು ರೂಪಾಯಿಗೆ ಪ್ರಸಾದ ಮಾರಾಟ ಆಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಟೆಂಡರ್‌ ಪಡೆದ ಇಸ್ಕಾನ್‌ ಸಂಸ್ಥೆಗೆ ಕರೆ ಮಾಡಿ, ನಾನು ಮಿನಿಸ್ಟರ್ ಮಾತನಾಡುತ್ತಿದ್ದೇನೆ. 60 ರೂ.ಗೆ ಎರಡು ಲಾಡುಗಳನ್ನು ಮಾರಾಟ ಮಾಡಬೇಕು. 1000 ರೂ. 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ದರ್ಶನ ಮಾಡಿದವರಿಗೆ ಉಚಿತವಾಗಿ ಲಾಡು ನೀಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

Must Read