ನಾನು ಮಧ್ಯಮ ವರ್ಗಕ್ಕೆ ಸೇರಿದವಳು, ಅವರ ಕಷ್ಟ ನನಗೂ ಗೊತ್ತು: ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆದ ಬಜೆಟ್ ಸಭೆಯಲ್ಲಿ ತೆರಿಗೆ ಹೊರೆಯ ಬಗ್ಗೆ ದೇಶದ ಜನರು ಎತ್ತಿರುವ ಕಳವಳಕ್ಕೆ ಪ್ರತಿಕ್ರಿಯಿಸುತ್ತಾ…ಪ್ರಸ್ತುತ ಸರ್ಕಾರವು ನಾಗರಿಕರ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಭಾನುವಾರ ನಿರ್ಮಲಾ ಅವರು ಮಧ್ಯಮ ವರ್ಗದವರ ಒತ್ತಡದ ಬಗ್ಗೆ ನನಗೆ ತಿಳಿದಿದೆ ಯಾಕೆಂದರೆ ತಾನೂ ಕೂಡ ಅದೇ ಮಧ್ಯಮ ವರ್ಗಕ್ಕೆ ಸೇರಿದವರು ಎಂದು ಹೇಳಿದರು.

ಸರ್ಕಾರವು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಲಿದೆ ಮತ್ತು ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರವನ್ನು ನೀಡುತ್ತದೆ ಎಂಬ ನಿರೀಕ್ಷೆಗಳ ನಡುವೆ ಸೀತಾರಾಮನ್ ಅವರು ಫೆಬ್ರವರಿ 1 ರಂದು ಲೋಕಸಭೆಯಲ್ಲಿ 2023-24 ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ನಿಯತಕಾಲಿಕೆ ಪಾಂಚಜನ್ಯ ಪತ್ರಿಕೆಯನ್ನು ಆಯೋಜಿಸಿ ಮಾತನಾಡಿದ ಅವರು, ನಾನು ಕೂಡ ಮಧ್ಯಮ ವರ್ಗದ ವ್ಯಕ್ತಿ. ಹಾಗಾಗಿ ಮಧ್ಯಮ ವರ್ಗದವರ ಒತ್ತಡವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಹಾಗಾಗಿ ಅವರ ಕಷ್ಟ ನನಗೆ ಗೊತ್ತಿದೆ ಎಂದರು.

ಮಧ್ಯಮ ವರ್ಗದ ಜನರ ಮೇಲೆ ಮೋದಿ ಸರ್ಕಾರ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ ಎಂದು ನಿರ್ಮಲಾ ನೆನಪಿಸಿದರು. ಅಲ್ಲದೆ, 5 ಲಕ್ಷದವರೆಗಿನ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ಘೋಷಿಸಿದರು. 27 ನಗರಗಳಲ್ಲಿ ಮೆಟ್ರೋ ರೈಲು ಜಾಲವನ್ನು ಅಭಿವೃದ್ಧಿಪಡಿಸುವುದು ಮತ್ತು ಜೀವನ ಸೌಕರ್ಯವನ್ನು ಹೆಚ್ಚಿಸಲು 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವುದು ಮುಂತಾದ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!