ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂಬ ನಂಬಿಕೆ ನನಗಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂಬ ನಂಬಿಕೆಯಿಲ್ಲ. ಅವರು ರಾಜೀನಾಮೆ ಕೊಡಲಿ ಎಂದೂ ನಾನು ಹೇಳಲ್ಲ. ಕಾನೂನು ಪ್ರಕಾರ ಏನು ನಡೆಯಬೇಕು ಅದು ನಡೆಯಲಿದೆ. ನಾವು ಅವರಂತೆ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.
ಹಿಂದೆ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಮುಡಾ ಅಕ್ರಮದ ಬಗ್ಗೆ ತನಿಖೆ ಎದುರಿಸಲಿ ಎಂದು ನಾವು ಹೇಳುತ್ತಿದ್ದೇವೆ ಎಂದರು.
ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಹರಿಹಾಯ್ದ ಕುಮಾರಸ್ವಾಮಿ, ನನ್ನ ವಿರುದ್ಧ ಆರೋಪ ಮಾಡಿ ಸಿಡಿ ಮಾಸ್ಟರ್ ಸಿಡಿ ತಯಾರಿ ಮಾಡಲು ಹೈದರಾಬಾದ್ ಗೆ ಹೋಗಿದ್ದರು. ನನ್ನ ವಿರುದ್ಧ ಡಿನೋಟಿಫೇಷನ್, ಅಕ್ರಮ ಗಣಿಗಾರಿಕೆಯ ನಾಲ್ಕು ಕೇಸ್ ಗಳನ್ನು ಹಾಕಿದ್ರು. 150 ಕೋಟಿ ಸಂಗ್ರಹ ಮಾಡಿದ್ದಾಗಿ ಆರೋಪ ಮಾಡಿ ಕೇಸ್ ದಾಖಲಿಸಿದರು ಸಿಡಿ ಶಿವು, ಇದರಿಂದ ನನಗೆ ಏನೂ ಆಗಿಲ್ಲ. ನಾವು ಕಾಂಗ್ರೆಸ್ ನ್ನವರಂತೆ ಕೀಳುಮಟ್ಟದ ರಾಜಕಾರಣ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.