ಹದಿಹರೆಯದವರಲ್ಲಿ ಮೊಡವೆ ಸಮಸ್ಯೆಗಳಿಗೆ ಇದೇ ಕಾರಣ ಎಂದು ಹೇಳಲಾಗುವುದಿಲ್ಲ. ಇಂದಿನ ವೇಗದ ಜೀವನಶೈಲಿ ಮತ್ತು ಜಂಕ್ ಫುಡ್ ಕೂಡ ಇದಕ್ಕೆ ಕಾರಣ. ಮೊಡವೆಗಳ ವಿರುದ್ಧ ಹೋರಾಡಲು ಕೆಲವು ಸಲಹೆಗಳು ಇಲ್ಲಿವೆ.
1. ಲೋಳೆಸರದ ಒಳಭಾಗವನ್ನು ತೆಗೆದು ಪ್ರತಿ ದಿನ ರಾತ್ರಿ ಮುಖಕ್ಕೆ ಹಚ್ಚಿದರೆ ಕಪ್ಪು ಮೊಡವೆಗಳು ಗುಣವಾಗುತ್ತದೆ.
3. ಶ್ರೀಗಂಧವನ್ನು ರೋಸ್ ವಾಟರ್ ನೊಂದಿಗೆ ಬೆರೆಸಿ ಮೊಡವೆಗಳ ಮೇಲೆ ಹಚ್ಚಿ.
4. ಮೊಡವೆ ದಪ್ಪವಾಗಿದ್ದರೆ, ನೋವು ಮತ್ತು ತುರಿಕೆ ಇದ್ದರೆ, ಇಂಗನ್ನು ಬೆಚ್ಚಗಿರುವ ನೀರಿನಲ್ಲಿ ತೇದು ಮತ್ತು ಅದನ್ನು ಮೊಡವೆ ಸುತ್ತಲೂ ಇರಿಸಿ ತುರಿಕೆ ನಿವಾರಿಸುತ್ತದೆ.
5. ಜೀರಿಗೆ ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ಪಿತ್ತ ಮತ್ತು ರಕ್ತದಿಂದ ಉಂಟಾಗುವ ಮೊಡವೆಗಳು ನಿವಾರಣೆಯಾಗುತ್ತದೆ.
6. ಒಂದು ಬಟ್ಟಲು ಹಾಲಿಗೆ 5 ಚಮಚ ನಿಂಬೆ ರಸ ಮತ್ತು ಒಂದು ಚಮಚ ಗ್ಲಿಸರಿನ್ ಕಲಸಿ ಮುಖಕ್ಕೆ ಲೇಪನ ಮಾಡಿದರೆ ಮೊಡವೆ ಕಡಿಮೆಯಾಗುತ್ತದೆ.