LOVE | I love you ಹೇಳ್ಲೇಬೇಕು ಅಂತಿಲ್ಲ, ಈ ಥರನೂ ಪ್ರೀತಿ ವ್ಯಕ್ತಪಡಿಸ್ಬೋದು..

ನಾವೇನು ಐ ಲವ್ ಯು ಹೇಳೋ ಜನರೇಷನ್, ಆದ್ರೆ ನಮ್ಮಪ್ಪ ಅಮ್ಮ, ಅಜ್ಜಿ ತಾತ, ಅವ್ರ ಅಪ್ಪ ಅಮ್ಮ ಎಲ್ಲಾ ಐ ಲವ್ ಯು ಹೇಳಿರ್ಲಿಲ್ಲ. ಆದ್ರೂ ಅವ್ರ್ ಮಧ್ಯೆ ಎಷ್ಟೊಂದು ಪ್ರೀತಿ ಇದೆ ಅಲ್ವಾ?

ಪ್ರೀತಿ ತೋರಿಸೋಕೆ ಐ ಲವ್ ಯು ಹೇಳ್ಲೇ ಬೇಕಿಲ್ಲ. ಹೇಳೋದು ಸುಲಭ, ಆದ್ರೆ ನಿಭಾಯ್ಸೋದು ಕಷ್ಟ. ಹಿಂದಿನವರು ಹೇಳೋದು ಕಮ್ಮಿ ನಿಭಾಯ್ಸೋದು ಜಾಸ್ತಿ. ಈಗಿನ ಕೆಲವ್ರು ನಿಭಾಯ್ಸೋದು ಕಮ್ಮಿ ಬರೀ ಹೇಳೋದೇ ಜಾಸ್ತಿ.

  • ಪ್ರೀತಿ ಹೇಳೋಕೆ ಈ ರೀತಿ ಮಾಡಿ ನೋಡಿ.. ಜೀವನ ಬದಲಾಗದಿದ್ರೆ ಕೇಳಿ..
  • ಹೆಂಡತಿ ಒಬ್ಳೆ ಮನೆಕೆಲಸಲ ಆಫೀಸ್ ಕೆಲಸ ಮಾಡಿ ಸುಸ್ತಾಗ್ತಿದಾಳೆ ಅಂತ ಗೊತ್ತಿದ್ರೂ ಕಾಲ ಮೇಲೆ ಕಾಲು ಹಾಕಿ ಕೂರ್ಬೇಡಿ, ಅವಳಿಗೆ ಸಹಾಯ ಮಾಡಿ.
  • ಒಂದು ದಿನ ನೀವೇ ಅಡುಗೆ ಮಾಡಿ ಸರ್ಪೈಸ್ ಮಾಡಿ, ರುಚಿ ಹೇಗಾದ್ರೂ ಇರ್ಲಿ ಇಷ್ಟಪಟ್ಟು ತಿಂತಾಳೆ.
  • ಆಗಾಗ ಗಿಫ್ಟ್ಸ್ ಕೊಡಿ, ದುಬಾರಿ ಅಂತಲ್ಲ. ನಿಮಗೆ ಆಗುವಂಥದ್ದು.
  • ಒಂದಿನ ಕರೆದು ಅವಳ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ
  • ಬರೀ ಆಫೀಸ್ ಮನೆ ಅಷ್ಟೇ ಅಲ್ಲ. ಅವಳನ್ನು ಹೊರಗೆ ಕರೆದುಕೊಂಡು ಹೋಗಿ
  • ಬೇರೆಯವರ ಮುಂದೆ ಅವಳನ್ನು ಬಿಟ್ಟುಕೊಡಬೇಡಿ, ಅದು ಕುಟುಂಬದವರೇ ಆಗಿರಲಿ. ಹೊಗಳುವಾಗ ಎಲ್ಲರೆದು ಬುದ್ದಿ ಹೇಳೋದು ನಾಲ್ಕು ಗೋಡೆ ಮಧ್ಯೆ ಮಾತ್ರ.
  • ದೊಡ್ಡ ದೊಡ್ಡ ವಿಷಯಗಳಲ್ಲಿ ಅವಳ ಮಾತಿಗೂ ಬೆಲೆ ಕೊಡಿ, ಒಳಗ್ ಹೋಗು ನಿಂಗಿದೆಲ್ಲ ಗೊತ್ತಾಗಲ್ಲ ಅನ್ಬೇಡಿ.
  • ಓಡಾಡ್ಕೋತಾ ಒಂದು ಹಗ್ ಮಾಡೋದು, ಸುಸ್ತಾಗಿ ಬಂದಾಗ ಹಣೆಗೊಂದು ಮುತ್ತು ಕೊಡೋದು ಕಷ್ಟವೇನಲ್ಲ.
  • ಅವಳ ಜೊತೆ ಮಾತನಾಡುವಾಗ ಮೊಬೈಲ್ ನೋಡಬೇಡಿ, ಸಂಪೂರ್ಣ ಪ್ರೀತಿಯಿಂದ ಮಾತನಾಡಿ.
  • ಆಫೀಸ್‌ಗೆ ಹೋದ ನಂತರವೂ ರೊಮ್ಯಾಂಟಿಕ್ ಮೆಸೇಜ್ ಹಾಕಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!