ನನಗೆ ಪರಿಹಾರ ಹಣ ಬೇಡ: ಮುಂಬೈ ಮನೆ ಕಳೆದುಕೊಂಡ ಕಂಗನಾ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರ ಮನೆಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ 2020ರಲ್ಲಿ ಕೆಡವಿದ್ದರು. ಇದಕ್ಕೆ ಸಂಬಂಧಿಸಿ ಅವರಿಗೆ ಪರಿಹಾರ ಹಣ ಸಿಗಬೇಕಿತ್ತು. ಆದರೆ, ಈವರೆಗೂ ಅವರಿಗೆ ಹಣ ಸಿಕ್ಕಿಲ್ಲ. ಈ ಬಗ್ಗೆ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ.

ಅಕ್ರಮ ನಿರ್ಮಾಣ ಆರೋಪ ಹೊರಿಸಿ ಕಂಗನಾ ಅವರ ಮನೆಯ ಒಂದು ಭಾಗವನ್ನು 2020ರಲ್ಲಿ ಕೆಡವಲಾಯಿತು. ಈ ವಿಚಾರದಲ್ಲಿ ಶಿವಸೇನೆ ಹಾಗೂ ಕಂಗನಾ ಮಧ್ಯೆ ಕಿತ್ತಾಟ ನಡೆಯಿತು. ಕಂಗನಾ ವೈ+ ಕೆಟಗರಿ ಭದ್ರತೆ ನೀಡಲಾಯಿತು. ‘ಕಂಗನಾ ರಣಾವತ್ ಅವರು ತೆರಿಗೆದಾರರ ಹಣವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಭದ್ರತೆ ನೀಡಿದ ವಿಚಾರವನ್ನು ಅನೇಕರು ಟೀಕೆ ಮಾಡಿದ್ದರು. ಈಗ ಕಂಗನಾ ತಮಗೆ ಬರಬೇಕಿದ್ದ ಪರಿಹಾರ ಹಣವನ್ನು ನಿರಾಕರಿಸಿದ್ದಾರೆ.

ಇತ್ತೀಚೆಗೆ ಕಂಗನಾಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನನಗೆ ಪರಿಹಾರ ಹಣ ಸಿಕ್ಕಿಲ್ಲ. ನನಗೆ ಆದ ನಷ್ಟವನ್ನು ಅಳೆಯಲು ಮೌಲ್ಯಮಾಪಕರು ಬರಬೇಕಿತ್ತು. ಈಗ ನಾನು ಮಹಾರಾಷ್ಟ್ರ ಸಿಎಂ ಏಕ್​ನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದೇನೆ. ಮೌಲ್ಯಮಾಪಕರನ್ನು ಕಳಿಸಬೇಡಿ. ನನಗೆ ಪರಿಹಾರ ಹಣ ಬೇಡ ಎಂದು ಹೇಳಿದ್ದೇನೆ’ ಎಂಬುದಾಗಿ ಅವರು ತಿಳಿಸಿದ್ದಾರೆ.

ನನಗೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಹೇಳಿದೆ. ಆದರೆ ಅವರು ಎಂದಿಗೂ ಮೌಲ್ಯಮಾಪಕರನ್ನು ಕಳುಹಿಸಲಿಲ್ಲ. ನಾನು ಆ ಬಗ್ಗೆ ಬೇಡಿಕೆಯನ್ನೂ ಇಟ್ಟಿಲ್ಲ. ಏಕೆಂದರೆ ಅದು (ಪರಿಹಾರದ ಹಣ) ತೆರಿಗೆ ಪಾವತಿದಾರರ ಹಣ ಮತ್ತು ನನಗೆ ಆ ಹಣ ಬೇಡ’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!