ಫೂಟ್‌ಪಾತ್‌ನಿಂದ ಬಂದ ಹುಡುಗನಿಗೆ ಈ ಗೌರವ ಸಿಗುತ್ತದೆ ಎಂದು ನಾನು ಕಲ್ಪನೆಯೂ ಇಲ್ಲ: ಫಾಲ್ಕೆ ಪ್ರಶಸ್ತಿ ಖುಷಿಯಲ್ಲಿ ಮಿಥುನ್ ದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರುದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾವು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಚ್ಚರಿ ಹಾಗೂ ಖುಷಿ ವ್ಯಕ್ತಪಡಿಸಿದ್ದಾರೆ.

ಆಕ್ಟೋಬರ್ 8ರಂದು ನಡೆಯುವ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಮಿಥುನ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಪುರಸ್ಕರಿಸಲಾಗುತ್ತದೆ.

ಮಿಥುನ್ ಚಕ್ರವರ್ತಿಯವರು ಭಾರತೀಯ ಸಿನಿಮಾದಲ್ಲಿ ಗಾಡ್‌ ಫಾದರ್ ಇಲ್ಲದೇ ತಳಮಟ್ಟದಿಂದ ಬೆಳೆದು ಬಂದಂತಹ ಪ್ರತಿಭೆ. ಅವರ ಐತಿಹಾಸಿಕ ಸಿನಿಮಾ ಡಿಸ್ಕೋ ಡಾನ್ಸರ್‌ನಲ್ಲಿನ ಅವರ ನಟನೆಯನ್ನು ಸಿನಿಮಾ ಅಭಿಮಾನಿಗಳು ಎಂದಿಗೂ ಮರೆಯಲಾರರು. ಇಂತಹ ನಟನಿಗೆ ಈಗ ಭಾರತೀಯ ಸಿನಿಮಾದ ಅತ್ಯುನ್ನತವೆನಿಸಿದ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಸಿನಿಮಾ ಪ್ರಿಯರು ಗಾಗೂ ಚಕ್ರವರ್ತಿಯವರ ಅಭಿಮಾನಿಗಳಿಗೆ ಸಂತಸ ತಂದಿದೆ.

ಈ ಬಗ್ಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಲ್ಲದೇ ತುಂಬು ಹೃದಯದ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಫೂಟ್‌ಪಾತ್‌ನಿಂದ ಬಂದ ಹುಡುಗನೋರ್ವ ಈ ರೀತಿಯ ದೊಡ್ಡ ಮಟ್ಟದ ಗೌರವ ಸಿಗುತ್ತದೆ ಎಂದು ನಾನು ಕಲ್ಪನೆಯೂ ಮಾಡಿರಲಿಲ್ಲ ಎಂದು ಮಿಥುನ್‌ ಚಕ್ರವರ್ತಿ ಹೇಳಿಕೊಂಡಿದ್ದಾರೆ.

1960ರ ಜೂನ್ 16ರಂದು ಕೋಲ್ಕತ್ತಾದಲ್ಲಿ ಜನಿಸಿದ ಮಿಥುನ್ ಚಕ್ರವರ್ತಿಯವರು ತುಂಬಾ ತಳಮಟ್ಟದಿಂದ ಬೆಳೆದು ಬಂದತಹ ಪ್ರತಿಭೆ ಅವರ ಜೀವನ ಹಲವರಿಗೆ ಸ್ಪೂರ್ತಿಯಾಗಿದೆ. ಈ ಪ್ರಶಸ್ತಿ ಬಂದಿರುವ ವಿಚಾರ ಕೇಳಿ ನಾನು ಸಂಪೂರ್ಣ ಮೂಕವಿಸ್ಮಿತನಾಗಿದ್ದೇನೆ. ನನ್ನನ್ನು ನಂಬಿ, ನನಗೆ ಖುಷಿಯಿಂದ ನಗಲೂ ಆಗುತ್ತಿಲ್ಲ, ಅಳಲು ಆಗುತ್ತಿಲ್ಲ, ಏಕೆಂದರೆ ಅಕ್ಷರಶಃ ಏನೂ ಅಲ್ಲದ, ಏನೂ ಇಲ್ಲದ ವ್ಯಕ್ತಿಯೊಬ್ಬ ಈ ಸಾಧನೆ ಮಾಡಿದ. ಇದನ್ನೇ ನಾನು ನನ್ನ ಆರ್ಥಿಕವಾಗಿ ಸಧೃಡರಲ್ಲಾದ ಅಭಿಮಾನಿಗಳಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ನಾನು ಇದನ್ನು ಮಾಡಲು ಸಾಧ್ಯವಾಯ್ತು ಎಂದರೆ ನೀವು ಇದನ್ನೂ ಮಾಡುವಿರಿ ಎಂದು ಭಾವುಕರಾಗಿದ್ದಾರೆ.

ಮಿಥುನ್ ಚಕ್ರವರ್ತಿಯವರನ್ನು ಅವರ ಅಭಿಮಾನಿಗಳು ಮಿಥುನ್ ದಾ ಎಂದು ಪ್ರೀತಿಯಿಂದ ಕರೆಯುತ್ತಾರೆ. ಮಿಥುನ್ ಅವರು 1976ರಲ್ಲಿ ತೆರೆಕಂಡ ತಮ್ಮ ಮೊದಲ ಸಿನಿಮಾ ಮ್ರಿಗಯಾದಲ್ಲಿನ ನಟನೆಗಾಗಿ ಅವರಿಗೆ ಉತ್ತಮ ನಟ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಲಭ್ಯವಾಯ್ತು. ಇದರ ಜೊತೆಗೆ 1992ರಲ್ಲಿ ತೆರೆಕಂಡ ತಹ್ದರ್‌ ಕಥಾ ಹಾಗೂ 1998ರಲ್ಲಿ ತೆರೆಕಂಡ ಸ್ವಾಮಿ ವಿವೇಕಾನಂದ ಪ್ರಶಸ್ತಗೂ ಅವರಿಗೆ ಉತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಲಭ್ಯವಾಗಿದೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!