ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನಲ್ಲಿ ನಾನು 600 ಮದ್ರಸಾಗಳನ್ನು ಮುಚ್ಚಿದ್ದೇನೆ. ಇದೇ ವರ್ಷದಲ್ಲಿ ಇನ್ನೂ 300 ಮದ್ರಸಾಗಳನ್ನು ಸಂಪೂರ್ಣವಾಗಿ ಬಂದ್ ಮಾಡುತ್ತೇನೆ ಎಂದು ಎಂಐಎಂ ನಾಯಕ ಅಸಾದುದ್ದೀನ್ ಓವೈಸಿಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ನೇರ ಸವಾಲು ಹಾಕಿದ್ದಾರೆ.
ಹೈದರಾಬಾದ್‌ನ ಕರೀಂನಗರದಲ್ಲಿ ನಡೆದ ‘ಹಿಂದೂ ಏಕತಾ ಯಾತ್ರೆ’ ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಲವ್ ಜಿಹಾದ್ ಮತ್ತು ಮದ್ರಸಾಗಳನ್ನು ನಿಲ್ಲಿಸುವತ್ತ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮುಂಬರುವ ತೆಲಂಗಾಣ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ತೆಲಂಗಾಣ ‘ರಜಾಕರ ರಾಜ್ಯ’ ದಿಂದ ‘ರಾಮರಾಜ್ಯ’ ವಾಗಲಿದೆ ಎಂದು ಹೇಳಿದ್ದಾರೆ.
ನಿಮಗೆ ಲವ್ ಜಿಹಾದ್ ಅನ್ನು ಅರ್ಥ ಮಾಡಿಕೊಳ್ಳಲು ‘ದ ಕೇರಳ ಸ್ಟೋರಿ’ ಸಿನಿಮಾ ವೀಕ್ಷಿಸಿ. ಸುಳ್ಳು ಜಾತ್ಯಾತೀತರು ಸಿನಿಮಾ ಸುಳ್ಳು ಎನ್ನುತ್ತಾರೆ. ಅಸ್ಸಾಂನಲ್ಲಿ ಲವ್ ಜಿಹಾದ್ ಪ್ರಕರಣಗಳನ್ನು ನಿಮಗೆ ತೋರಿಸುತ್ತೇನೆ. ಅದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಅಸ್ಸಾಂನಲ್ಲಿ ಮದರಸಾ ಶಿಕ್ಷಣ, ಬಹುಪತ್ನಿತ್ವವನ್ನು ಕೊನೆಗಾಣಿಸಲು ಕೆಲಸ ಮಾಡಲಾಗುತ್ತಿದೆ . ಅಲ್ಲದೆ, ಮದ್ರಸಾ ಶಿಕ್ಷಣದ ಬದಲು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಕಟ್ಟಲು ಬಯಸುತ್ತೇವೆ ಎಂದರು.
ಇತ್ತೀಚೆಗಷ್ಟೇ ಅಸ್ಸಾಂನಲ್ಲಿ ಮಹಿಳೆಯರು ನಾಲ್ಕು ಪುರುಷರನ್ನು ಮದುವೆಯಾಗುತ್ತಾರೆ. ಸಾಧ್ಯವಿದ್ದರೆ ಅದನ್ನು ನಿಲ್ಲಿಸಿ ಎಂದು ಅಸಾದುದ್ದೀನ್ ಓವೈಸಿ ಅಲ್ಲಿನ ಸಿಎಂ ಹಿಮಂತ ಬಿಸ್ವಾ ಶರ್ಮಾಗೆ ಸವಾಲು ಹಾಕಿದ್ದರು.