September 30, 2026
Wednesday, September 30, 2026
spot_img

ನನ್ನ ಹಳೆಯ ಸ್ನೇಹಿತ ನಾಗೇಶ್‌ಗೆ ಗೌರವ ಸಲ್ಲಿಸಲು ಬಂದಿದ್ದೇನೆ: ಅಂತಿಮ ದರುಶನ ಪಡೆದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಸಚಿವ ಬಿ.ಸಿ ನಾಗೇಶ್‌ ನಿನ್ನೆ ತಡರಾತ್ರಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಸಿಎಂ ಡಿ.ಕೆ. ಶಿವಕುಮಾರ್‌ ಅಂತಿಮ ದರುಶನ ಪಡೆದಿದ್ದಾರೆ.

ತದನಂತರ ಭಾವುಕರಾಗಿ ಟ್ವೀಟ್‌ ಮಾಡಿದ್ದು, ನನ್ನ ಹಳೆಯ ಸ್ನೇಹಿತನನ್ನು ಕೊನೆಯ ಬಾರಿ ನೋಡಲು ಬಂದಿದ್ದೇನೆ. ಶಾಸಕರಾಗಿ, ಸಚಿವರಾಗಿ ನಾಗೇಶ್‌ ನೀಡಿದ ಕೊಡುಗೆ ಅಪಾರ. ಪ್ರಾಥಮಿಕ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಶ್ಲಾಘನೀಯ ಎಂದು ಹೇಳಿದರು.

ಅವರ ಅಗಲಿಕೆ ಕುಟುಂಬ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು, ರಾಜ್ಯ ಸರ್ಕಾರದ ವತಿಯಿಂದ ಅವರಿಗೆ ಸೂಕ್ತ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅವರಿಗೆ ಗೌರವ ಸಲ್ಲಿಸುವುದು ನನ್ನ ಕರ್ತವ್ಯ. ರಾಜ್ಯ ಸರ್ಕಾರವೂ ಅವರಿಗೆ ಸಂಪೂರ್ಣ ಗೌರವ ನೀಡಲಿದೆ. ಅವರ ನಿಧನವು ಕುಟುಂಬಕ್ಕೆ ಮಾತ್ರವಲ್ಲ, ಅವರ ಪಕ್ಷಕ್ಕೂ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಹೇಳಿದರು.

Must Read