ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪುತ್ರಿ ಬುಧವಾರ ತಿರುಮಲ ದೇವಸ್ಥಾನ ಪ್ರವೇಶಿಸುವ ಮುನ್ನ ವೆಂಕಟೇಶ್ವರನ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಹಿಂದೂಯೇತರರು ಮೊದಲು ದೇವರಲ್ಲಿ ನಂಬಿಕೆ ಇದೆ ಘೋಷಿಸುವುದು ಕಡ್ಡಾಯವಾಗಿದೆ. ಹೀಗಾಗಿ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರಿ ಪಲಿನಾ ಅಂಜನಿ ಕೊನಿಡೆಲಾ ಅವರು ಹಿಂದೂಯೇತರರಾಗಿದ್ದು, ತಮ್ಮ ನಂಬಿಕೆಯನ್ನು ತಿಳಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಸಿಬ್ಬಂದಿ ನೀಡಿದ ದಾಖಲೆಗಳಿಗೆ ಸಹಿ ಹಾಕುವ ಮೂಲಕ ಪಲಿನಾ ವೆಂಕಟೇಶ್ವರನಲ್ಲಿ ಭಕ್ತಿ ಹಾಗೂ ನಂಬಿಕೆ ಇರುವುದಾಗಿ ಹೇಳಿದ್ದಾರೆ.
ಪಲಿನಾ ಅಂಜನಿ ಅವರು ಅಪ್ರಾಪ್ತರಾಗಿರುವುದರಿಂದ ಅವರ ತಂದೆ ಪವನ್ ಕಲ್ಯಾಣ್ ಅವರು ದಾಖಲೆಗಳನ್ನು ಅನುಮೋದಿಸಿದ್ದಾರೆ ಎಂದು ಜನಸೇನಾ ಪಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ, ಪವನ್ ಕಲ್ಯಾಣ್ ಅವರು ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೇವಸ್ಥಾನ ಶುದ್ಧೀಕರಣಕ್ಕಾಗಿ ಮತ್ತು ಪಾಪಗಳಿಗೆ ಪ್ರಾಯಶ್ಚಿತ್ತಕ್ಕಾಗಿ 11 ದಿನಗಳ ದೀಕ್ಷೆಯ ಭಾಗವಾಗಿ ದೇವಾಲಯಕ್ಕೆ ಮೂರು ದಿನಗಳ ಭೇಟಿಯಲ್ಲಿದ್ದಾರೆ.
ಅಧಿಕಾರಕ್ಕಾಗಿ ಹೊಸಾ ನಟನೆ, ಹೊಸಾ ವೇಷ ಭೂಷಣ ಸುರು ಹಚಗೊಂಡರು,, ದೇವರು ಧರ್ಮ ಇಂಥವರಿಗೆ ವ್ಯವಹಾರದ ಬಂಡವಾಳ