ಜಮ್ಮು- ಕಾಶ್ಮೀರದ ಬಿಜೆಪಿ ಅಭ್ಯರ್ಥಿ ಮುಸ್ತಾಕ್ ಅಹ್ಮದ್ ಶಾ ಬುಖಾರಿ ಹೃದಯಾಘಾತದಿಂದ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಸುರನ್‌ಕೋಟೆಯ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಭ್ಯರ್ಥಿ ,ಮಾಜಿ ಶಾಸಕ ಮುಸ್ತಾಕ್ ಅಹ್ಮದ್ ಶಾ ಬುಖಾರಿ ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಷ್ತಾಕ್ ಅಹ್ಮದ್ ಬುಖಾರಿ ಅವರು ಇಂದು ಪೂಂಚ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಬುಖಾರಿ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಬಿಜೆಪಿ ನಾಯಕರ ಪ್ರಕಾರ, ಬುಖಾರಿ ಅವರು ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು ಮತ್ತು ಇಂದು ಬೆಳಗ್ಗೆ 7 ಗಂಟೆಗೆ ಅವರಿಗೆ ಹೃದಯಾಘಾತವಾಗಿದೆ. ಅವರ ನಿಧನದಿಂದ ಪಕ್ಷ ಮತ್ತು ಸಮುದಾಯಕ್ಕೆ ಗಮನಾರ್ಹ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಬುಖಾರಿ ಅವರು ಕಳೆದ ಫೆಬ್ರವರಿಯಲ್ಲಿ ಬಿಜೆಪಿ ಸೇರಿದ್ದರು ಮತ್ತು ಸುರನ್‌ಕೋಟೆಯಿಂದ ಕೇಸರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸೆಪ್ಟೆಂಬರ್ 25 ರಂದು ಸುರನ್‌ಕೋಟೆ ಸೇರಿದಂತೆ 25 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!