ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ಮೋದಿ ಅವರ ಕೆಲಸಗಳಿಗೆ ನಾನು ಮನಸೋತಿದ್ದೇನೆ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ ಎಂದು ನಟ ಅನಂತ್ ನಾಗ್ ಬಹಿರಂಗವಾಗಿ ಘೋಷಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವೇ ನಮಗೆ ಸ್ಫೂರ್ತಿ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ ಎಂದರು.
ರಾಷ್ಟ್ರದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅನ್ನೋ ವಿಚಾರದಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಾಗ ನಾನು ಯೋಚಿಸಿದೆ. ಇದ್ಯಾವುದು ಮೋದಿ ತಂದಿರುವ ಹೊಸ ಕಾರ್ಯಕ್ರಮವಾ ಅಂತಾ ಯೋಚನೆಗೆ ಬಿದ್ದೆ. ಪತ್ರಿಕೆಗಳು ಹೀಗೆ ನಡೆಯಬೇಕು ಅಂತಾ ಸರ್ಕಾರಗಳು ತೀರ್ಮಾನ ಮಾಡಬೇಕಾ? ಹೊಸ ಹೊಸ ಪೀಳಿಗೆಯ ಮಾಧ್ಯಮಗಳು ಹೇಗಿರಬೇಕು ಅಂತಾ ಅವರೇ ಚಿಂತಿಸಬೇಕು ಎಂದರು.