ರಾಷ್ಟ್ರಧ್ವಜಕ್ಕೆ ನಾನು ಅಪಮಾನ ಮಾಡಿಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಹೊಸದಿಗಂತ ವರದಿ, ಮೈಸೂರು:

ರಾಷ್ಟ್ರಧ್ವಜಕ್ಕೆ ನಾನು ಅಪಮಾನ ಮಾಡಿಲ್ಲ. ನನ್ನ ಫೋಟೋ ತಿರುಚಲಾಗಿದೆ. ಈ ಬಗ್ಗೆ ನಮ್ಮ ಬಳಿ ಫೋಟೋ ಮತ್ತು ವಿಡಿಯೋ ಸಾಕ್ಷ್ಯವಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿಸಿದರು.
ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದಡಿ ಕಾಂಗ್ರೆಸ್ ಮುಖಂಡರು ನೀಡಿರುವ ದೂರಿನ ಬಗ್ಗೆ ಶುಕ್ರವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ, ನಾನೆಲ್ಲೂ ರಾಷ್ಟçಧ್ವಜಕ್ಕೆ ಅಪಮಾನ ಮಾಡಿಲ್ಲ. ನನ್ನ ಕೈಯಲ್ಲಿ ಇದ್ದದ್ದು ರಾಷ್ಟ್ರಧ್ವಜವೇ, ನನ್ನ ಜೊತೆಯಲ್ಲಿದ್ದವರ ಕೈಯಲ್ಲೂ ರಾಷ್ಟçಧ್ವಜ ಇತ್ತು. ಆದರೆ ನನ್ನ ಆಗದವರ ಕಣ್ಣಿಗೆ ಮಾತ್ರ ಕೇಸರಿ ಧ್ವಜ ಕಂಡಿದೆ. ಕಾಂಗ್ರೆಸ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.
ರಾಷ್ಟç ಧ್ವಜದ ಬಣ್ಣವನ್ನು ಕೆಂಪು, ಬಿಳಿ, ಹಸಿರು ಎಂದವರು ಯಾರು?. ರಾಷ್ಟ್ರ ಧ್ವಜದ ಬಣ್ಣವೂ ಸರಿಯಾಗಿ ಗೊತ್ತಿಲ್ಲದವರು ಮಾಡಿರುವ ತಪ್ಪನ್ನು ಮರೆಮಾಚಲು ನನ್ನ ವಿರುದ್ಧ ಆರೋಪ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ ಎಂದು ಟೀಕಿಸಿದರು.
ದೇಶಕ್ಕೆ ಸ್ವಾತಂತ್ರ÷್ಯ ಸಿಗುತ್ತಿದ್ದಂತೆ ಕಾಂಗ್ರೆಸ್ ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಕರೆ ನೀಡಿದ್ದರು. ಆದರೆ, ಕೆಲ ಸ್ವಾರ್ಥ ಕಾಂಗ್ರೆಸ್ಸಿಗರು ಅದನ್ನು ರಾಜಕೀಯವಾಗಿ ಬಳಸಿಕೊಂಡು, ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಂಡರು. ಆಗಿನ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿ ಬಂದರು. ಆದರೆ, ಈಗ ಇರುವ ಯಾವುದೇ ಕಾಂಗ್ರೆಸ್ಸಿಗರು ಸ್ವಾತಂತ್ರ÷್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಜೈಲಿಗೂ ಹೋಗಿಲ್ಲ. ಬೇರೆ -ಬೇರೆ ಕಾರಣಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ನಾಯಕರು ಜೈಲಿಗೆ ಹೋದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಕುಟುಕಿದರು. ಮಾಜಿ ಸ್ವೀಕರ್ ರಮೇಶ್ ಕುಮಾರ್ ಅವರು, ಕಾಂಗ್ರೆಸ್ ಪಕ್ಷದಿಂದಾಗಿ ಇನ್ನೂ ಮೂರು ತಲೆ ಮಾರು ಕೂತು ತಿಂದರೂ ಕರಗದಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. 20 ರಿಂದ 30 ವರ್ಷಗಳ ಕಾಲ ಆಡಳಿತ ಮಾಡಿದವರು ಇಷ್ಟೋಂದು ಆಸ್ತಿ ಮಾಡಿಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ನವರಿಗೆ ದೇಶ, ತ್ಯಾಗ, ಹೋರಾಟ ಎಂದು ಇನ್ನುಷ್ಟು ವರ್ಷ ಬೇಕಾಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಆಡಳಿತದಲ್ಲಿಯೇ ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಅದರ ವಿರುದ್ಧ ಸಾವಿರಾರು ಮಂದಿ ಬಿಜೆಪಿಗರು ಹೋರಾಟ ನಡೆಸಿ, ಜೈಲಿಗೆ ಹೋಗಿ ಬಂದಿದ್ದಾರೆ. ಸಿದ್ದರಾಮಯ್ಯನವರು ಹೊಸ ಇತಿಹಾಸ ಬರೆದರೆ ಅದರಲ್ಲಿ ಇದನ್ನು ಸೇರಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ನವರು ಎಲ್ಲಾ ಪ್ರಯತ್ನದಲ್ಲೂ ವಿಫಲರಾಗಿದ್ದಾರೆ. ಹಾಗಾಗಿ ಹತಾಶೆಗೊಂಡು ಬಿಜೆಪಿಯವರ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಮದರಸಗಳಲ್ಲೂ ರಾಷ್ಟçಧ್ವಜ ಹಾರಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!