May 3, 2026
Sunday, May 3, 2026
spot_img

ನನಗೂ ಆ ಆಡಿಯೋಗೂ ಸಂಬಂಧವಿಲ್ಲ; ಸುಳ್ಳು ಆರೋಪ ಮಾಡುವವರ ಬೆವರಿಳಿಸಿದ ಸಚಿವ ತಿಮ್ಮಾಪುರ!

ಹೊಸದಿಗಂತ ಬಾಗಲಕೋಟೆ:

ಇತ್ತೀಚೆಗೆ ವೈರಲ್ ಆಗಿರುವ ಆಡಿಯೋ ಪ್ರಕರಣ ಹಾಗೂ ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಇಂದು ಸಿಡಿದೆದ್ದಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕಾನೂನು ಸಮರ ಸಾರುವುದಾಗಿ ಎಚ್ಚರಿಸಿದ್ದಾರೆ.

“ಉಪ್ಪು ತಿಂದವರು ನೀರು ಕುಡಿಯಲೇಬೇಕು” ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಸಚಿವರು, “ಆ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯಾರು ಈ ಷಡ್ಯಂತ್ರ ರೂಪಿಸಿದ್ದಾರೋ, ಅವರು ಅದರ ಫಲ ಅನುಭವಿಸಲೇಬೇಕು. ಉಪ್ಪು ತಿಂದ ಮೇಲೆ ನೀರು ಕುಡಿಯುವುದು ಅನಿವಾರ್ಯ” ಎಂದು ಮಾರ್ಮಿಕವಾಗಿ ಹೇಳಿದರು.

“ತಪ್ಪು ಮಾಡಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಜೀವನದಲ್ಲಿ ಇನ್ನೊಮ್ಮೆ ಇಂತಹ ತಪ್ಪು ಮಾಡಲು ಧೈರ್ಯ ಮಾಡಬಾರದು, ಅಂತಹ ಕಠಿಣ ಕ್ರಮವನ್ನು ನಾನು ಕೈಗೊಳ್ಳುತ್ತೇನೆ,” ಎಂದು ಸಚಿವರು ಗುಡುಗಿದರು. ಈ ಪ್ರಕರಣದ ಹಿಂದೆ ಯಾರದ್ದೋ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದರು.

ಖಾತೆ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಖಾತೆ ಬದಲಾವಣೆ ಮಾಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ. ನಾನು ಕೇಳಿದರೆ ಖಾತೆ ಬದಲಾವಣೆ ಆಗಿಯೇ ಆಗುತ್ತದೆ,” ಎಂದು ಆತ್ಮವಿಶ್ವಾಸದಿಂದ ನುಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !