May 28, 2026
Thursday, May 28, 2026
spot_img

ಒಂದೇ ಪಂದ್ಯದಲ್ಲಿ ಬ್ಯಾಟರ್‌ಗಳಿಗೆ ಶಾಕ್ ನೀಡಿದ ಸ್ಟಾರ್ಕ್: ಬುಮ್ರಾ ದಾಖಲೆಗೂ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಸೆಕೆಂಡ್ ಹಾಫ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ್ದ ಸ್ಟಾರ್ಕ್, ಮೊದಲ ಪಂದ್ಯದಲ್ಲೇ ತನ್ನ ಮಾರಕ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಶಾಕ್ ನೀಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿದ ಸ್ಟಾರ್ಕ್, 3 ಪ್ರಮುಖ ವಿಕೆಟ್ ಕಬಳಿಸಿ ಡೆಲ್ಲಿ ಪರ ಗೆಲುವಿನ ದಿಕ್ಕು ತೋರಿಸಿದರು. ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದ ಅವರು, ನಂತರ ಉತ್ತಮವಾಗಿ ಆಡುತ್ತಿದ್ದ ನಾಯಕ ರಿಯಾನ್ ಪರಾಗ್ ಹಾಗೂ ಮತ್ತೊಬ್ಬ ಪ್ರಮುಖ ಬ್ಯಾಟರ್‌ರನ್ನು ಪೆವಿಲಿಯನ್‌ಗೆ ಕಳುಹಿಸಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.

ಸ್ಟಾರ್ಕ್‌ನ ಈ ಪ್ರದರ್ಶನ ವಿಶೇಷವಾಗಲು ಮತ್ತೊಂದು ಕಾರಣವೂ ಇದೆ. ಈ ಆವೃತ್ತಿಯಲ್ಲಿ ಒಂದೇ ಪಂದ್ಯದಲ್ಲಿ ಅವರು ಪಡೆದ ವಿಕೆಟ್‌ಗಳ ಸಂಖ್ಯೆ, ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಎಂಟು ಪಂದ್ಯಗಳಲ್ಲಿ ಪಡೆದ ಒಟ್ಟು ವಿಕೆಟ್‌ಗಿಂತ ಹೆಚ್ಚಾಗಿದೆ. ಬುಮ್ರಾ ರನ್ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದರೂ, ವಿಕೆಟ್ ಪಡೆಯುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.

ಒಟ್ಟಾರೆ, ಸ್ಟಾರ್ಕ್‌ರ ಮಿಂಚಿನ ಸ್ಪೆಲ್ ಡೆಲ್ಲಿ ಶಿಬಿರಕ್ಕೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ಪಂದ್ಯಗಳ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !