October 9, 2026
Friday, October 9, 2026
spot_img

ಮುಂಬೈ ಗೆ ನಮನ್ ಧೀರ್ ಸಾಥ್: ಚೆನ್ನೈ ಗೆಲುವಿಗೆ ಸಾಧಾರಣ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈ ಸೂಪರ್ ಕಿಂಗ್ಸ್ ಬೊಂಬಾಟ್ ಬೌಲಿಂಗ್ ದಾಳಿಗೆ ಎಡವಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿತು. ಈ ಮೂಲಕ ಸಾಧಾರಣ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಮತ್ತೆ ಕಳಪೆ ಆಟವನ್ನು ಮುಂದುವರಿಸಿದ್ದು, ವಿಲ್ ಜಾಕ್ಸ್ ಕೇವಲ 1 ರನ್‌ಗೆ ಔಟಾದರು. ನಂತರ ರಯಾನ್ ರಿಕಲ್ಟನ್ ಮತ್ತು ನಮನ್ ಧೀರ್ಕೊಂಚ ರನ್ ಹೆಚ್ಚಿಸಲು ಮುಂದಾದರು. ರಿಕಲ್ಟನ್ 37 ರನ್ ಗಳಿಸಿ ಔಟಾದರು.

ಬಳಿಕ ಬಂದ ಆಟಗಾರರು ಹೆಚ್ಚು ಹೊತ್ತು ಗ್ರೀಸ್ ನಲ್ಲಿ ನಿಲ್ಲದೆ ಪೆವಿಲಿಯನ್ ನತ್ತ ಸಾಗಿದರು. ಒಂದೆಡೆ ವಿಟಕೆ ಉರುಳುತ್ತಿದ್ದರೆ, ನಮನ್ ಧೀರ್ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದರು.57 ರನ್ ಗಳಿಸಿದರು. ಈ ಮೂಲಕ ಸಂಕಷ್ಟದಲ್ಲಿದ್ದ ಮುಂಬೈಗೆ ನೆರವಾದರು.

Must Read