‘ನಾನು ಕೆಜಿಎಫ್ ನೋಡಿಲ್ಲ, ನನ್ನ ಅಭಿರುಚಿ ಅದಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟ ಕಿಶೋರ್ ಈವರೆಗೂ ಕೆ.ಜಿ.ಎಫ್ ೨ ನೋಡೇ ಇಲ್ಲವಂತೆ, ನನ್ನ ಅಭಿರುಚಿಯ ಸಿನಿಮಾ ಇದಲ್ಲ ಎಂದು ಕಿಶೋರ್ ಹೇಳಿಕೊಂಡಿದ್ದಾರೆ.

ಕಿಶೋರ್ ನೇರ ಮಾತು ಕೆಲವೊಮ್ಮೆ ವಿವಾದ ಆಗಿದ್ದೂ ಇದೆ, ಆದರೂ ತಲೆ ಕೆಡಿಸಿಕೊಳ್ಳದ ಕಿಶೋರ್ ತಮಗನಿಸಿದ್ದನ್ನು ಹೇಳುತ್ತಲೇ ಇದ್ದಾರೆ.

ಸಿನಿಮಾ ನೋಡಿಲ್ಲ, ಇದರರ್ಥ ಸಮಯ ಸಿಕ್ಕಿಲ್ಲ ಎಂದಲ್ಲ, ನನಗೆ ನೋಡಲು ಈಗಲೂ ಆಸಕ್ತಿ ಇಲ್ಲ. ಇದು ನನ್ನ ಅಭಿರುಚಿಯ ಸಿನಿಮಾ ಅಲ್ಲ ಎಂದು ಹೇಳಿದ್ದಾರೆ.

ಯಶ್ ಫ್ಯಾನ್ಸ್‌ಗೆ ಈ ಹೇಳಿಕೆ ಬೇಸರ ತರಿಸಿದ್ದು, ನಿಮ್ಮ ಅಭಿರುಚಿಯ ಸಿನಿಮಾ ಯಾವುದು ಎಂದು ಕೇಳಿದ್ದಾರೆ. ಇನ್ನು ಕೆಲ ವರ್ಗದ ಅಭಿಮಾನಿಗಳು ಇಷ್ಟ ಇಲ್ಲ ಎಂದರೆ ಏನಾಯ್ತು? ಎಲ್ಲರೂ ಎಲ್ಲಾ ಸಿನಿಮಾಗಳನ್ನು ನೋಡೋದಿಲ್ಲ. ಅವರ ಆಯ್ಕೆಯನ್ನು ಗೌರವಿಸಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!