Wednesday, February 8, 2023

Latest Posts

ಬಸವಧರ್ಮ ಪೀಠಾಧ್ಯಕ್ಷೆ ಸರ್ವಾಧಿಕಾರಿ ವರ್ತನೆ: ಡಾ. ಚನ್ನಬಸವಾನಂದ ಸ್ವಾಮೀಜಿ

ಹೊಸದಿಗಂತ ವರದಿ ಬಾಗಲಕೋಟೆ :

ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ‌ಡಾ.ಚನ್ನಬಸವಾನಂದ ಸ್ವಾಮೀಜಿ‌‌ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೂಡಲಸಂಗಮದ ಬಸವಧರ್ಮ ಪೀಠ ಧರ್ಮ ಪ್ರಚಾರಕ್ಕೆ ಅಲ್ಲದೇ ವ್ಯಾಪಾರೀಕರಣಕ್ಕೆ ನಿಂತಿದೆ. ಕಳೆದ 30 ವರ್ಷಗಳಿಂದ ಧರ್ಮ ಪ್ರಚಾರದಲ್ಲಿ ತೊಡಗಿದ್ದೇವೆ ಆದರೆ ಮಾತೆ ಮಹಾದೇವಿ ಲಿಂಗೈಕ್ಯರಾದ ನಂತರ ಬಸವಧರ್ಮ ಪೀಠ ಕಮರ್ಶಿಯಲ್ ಆಗುತ್ತಿದೆ ಎಂದರು.

ಬಸವಧರ್ಮ ಪೀಠ ಕಮರ್ಶಿಯಲ್ ಆಗುತ್ತಿರುವುದನ್ನು ವಿರೋಧಿಸಿದರೆ ನಮ್ಮನ್ನು ಟ್ರಸ್ಟದಿಂದ ಸರ್ವಾಧಿಕಾರಿ ಧೋರಣೆಯಿಂದ ನಮ್ಮ ನ್ನು ಹೊರ ಹಾಕಿದ್ದಾರೆ‌. ಟ್ರಸ್ಟ್ ದಿಂದ ಹೊರ ಹಾಕಿರುವ ಕುರಿತು ಕಾನೂನು ಹೋರಾಟ ನಡೆದಿದೆ ಎಂದರು.

ಬಸವರ್ಧಮ ಪೀಠದ 1000 ಸಾವಿರ ಆಸ್ತಿ ಇದೆ. ಇದನ್ನು ಲೂಟಿ ಹೊಡೆಯಲು ಈಗಿರುವ ಪೀಠಾಧ್ಯಕ್ಷೆ ಹಾಗೂ ಅವರ ಬೆಂಬಲಿಗರು ನಿಂತಿದ್ದಾರೆ. ಮಾತೆ ಮಹಾದೇವಿಯವರು ಧರ್ಮ ಪ್ರಚಾರ ಮಾಡುತ್ತಾ ಲಿಂಗಾಯತ ಸಮುದಾಯ ಒಗ್ಗೂಡಿಸುವ ಕೆಲಸ ಮಾಡಿದರು ಆದರೆ ಈಗಿನವರಿಗೆ ಇದೆಲ್ಲಾ ಬೇಡವಾಗಿದೆ ಎಂದು ದೂರಿದರು.

ಕೂಡಲಸಂಗಮ ಬಸವಧರ್ಮ ಪೀಠ ಸೇರಿ ಐದು ಪೀಠ ಸ್ಥಾಪನೆಗೆ ಕಾರಣಿಕರ್ತರಾದ ನಾವೆಲ್ಲರನ್ನು ಟ್ರಸ್ಟದಿಂದ ತೆಗೆದು‌ಹಾಕಿದ್ದಾರೆ. ಈಗಿರುವ ಪೀಠಾಧ್ಯಕ್ಷರು ಅಕ್ಷರವಂತರಲ್ಲ, ಅವರ ಹಿಂದೆ‌ಇರುವ ಸ್ವಾರ್ಥಿಗಳು ಹಾಗೂ ರಾಜಕಾರಣಿಗಳು, ಮಠಾಧೀಶರು ಸೇರಿಕೊಂಡ ಬಸವಧರ್ಮ ಪೀಠ ಒಡೆಯುವ ಹುನ್ನಾರ ನಡೆದಿದೆ‌ ಎಂದರು.

ಬಸವಧರ್ಮ ಪೀಠದಿಂದ ಹೊರ ಹಾಕಿರುವುದರಿಂದ ನಾವು ದೃತಿಗೆಡದೆ ಬಸವಧರ್ಮ ಪೀಠದ ಪರ್ಯಾಯವಾಗಿ ಜ.12 ರಿಂದ 14ರವರೆಗೆ ಸ್ವಾಭಿಮಾನಿ ಶರಣಮೇಳವನ್ನು ಕೂಡಲಸಂಗಮದಲ್ಲಿ ಆಯೋಜಿಸಲಾಗಿದೆ ಎಂದರು.
ಶರಣಮೇಳವನ್ನು ಡಾ.ಅಂಬೇಡ್ಕರ್ ಅವರ ಮೊಮ್ಮಗ ಡಾ.ಪ್ರಕಾಶ ಅಂಬೇಡ್ಕರ ಉದ್ಘಾಟಿಸುವರು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!