ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ದೊಡ್ಡ ಸುದ್ದಿಯನ್ನೇ ಮಾಡಿದ್ದ 2010ರಲ್ಲಿ ಐಪಿಎಲ್ ಹಗರಣದಲ್ಲಿ ಲಲಿತ್ ಮೋದಿ ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಬಳಿಕ ಲಲಿತ್ ಮೋದಿ ದೇಶವನ್ನು ತೊರೆದು ಪಲಾಯನ ಮಾಡಿದ್ದರು.ಇದೀಗ 14 ವರ್ಷಗಳ ನಂತರ ಮೊದಲ ಲಲಿತ ಮೋದಿ ಮೌನ ಮುರಿದಿದ್ದಾರೆ.
ಐಪಿಎಲ್ ಕುರಿತು ಹಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಸಂಸದ ಶಶಿ ತರೂರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಶಶಿ ತರೂರ್ ಪತ್ನಿ ದಿವಂಗತ ಸುನಂದ ಪುಷ್ಕರ್ ನಯಾಪೈಸೆ ಬಂಡವಾಳ ಹೂಡಿರಲಿಲ್ಲ. ಆದರೇ ಲಾಭದಲ್ಲಿ 15 ಪರ್ಸೆಂಟ್ನಷ್ಟು ಪಡೆಯುವ ಬಗ್ಗೆ ಉಲ್ಲೇಖವಾಗಿತ್ತು. ಇದನ್ನು ನೋಡಿ ನಾನು ಅಗ್ರಿಮೆಂಟ್ಗೆ ಸಹಿ ಹಾಕಲ್ಲ ಎಂದೆ ತಕ್ಷಣವೇ ಶಶಿ ತರೂರ್ ನನಗೆ ಫೋನ್ ಮಾಡಿದ್ದರು. ನಿಮ್ಮ ಮೇಲೆ ಐಟಿ,ಇಡಿ ದಾಳಿ ಮಾಡಿಸುವುದಾಗಿ ಧಮ್ಕಿ ಹಾಕಿದ್ದರು ಎಂದು ಲಲಿತ ಮೋದಿ ಆರೋಪಿಸಿದ್ದಾರೆ.
ನನಗೆ ಜೀವ ಬೆದರಿಕೆ ಬಂದಿದ್ದಕ್ಕೇ ನಾನು ದೇಶ ತೊರೆದೆ. ಆರಂಭದಲ್ಲಿ ಯಾವುದೇ ಕಾನೂನು ಸಮಸ್ಯೆಗಳು ನನಗೆ ದೇಶ ತೊರೆಯುವಂಥ ಪರಿಸ್ಥಿತಿ ಸೃಷ್ಟಿಸಲಿಲ್ಲ. ಆದರೆ, ದಾವೂದ್ ಇಬ್ರಾಹಿಂನಿಂದ ನನಗೆ ಜೀವ ಬೆದರಿಕೆ ಕರೆಗಳು ಬಂತು. ದಾವೂದ್ ಇಬ್ರಾಹಿಂ ನನ್ನ ಬೆನ್ನು ಬಿದ್ದಿದ್ದ. ನಾನು ಮ್ಯಾಚ್ ಫಿಕ್ಸಿಂಗ್ ಮಾಡಬೇಕೆಂದು ಆತ ಬಯಸುತ್ತಿದ್ದ. ಆದರೆ, ನಾನು ಮ್ಯಾಚ್ ಫಿಕ್ಸಿಂಗ್ ಗೆ ಸಿದ್ಧನಿರಲಿಲ್ಲ. ನನಗೆ ಭ್ರಷ್ಟಾಚಾರ ವಿರೋಧಿ ಅಭಿಯಾನ ತುಂಬಾ ಮುಖ್ಯವಾಗಿತ್ತು ಹಾಗೂ ಪಂದ್ಯದ ಸಮಗ್ರತೆ ನನಗೆ ಬಹಳ ಮುಖ್ಯವಾಗಿತ್ತು.
ವಿಮಾನ ನಿಲ್ದಾಣದಲ್ಲಿ ಸುರಕ್ಷತೆಗಾಗಿ ವಿಐಪಿ ನಿರ್ಗಮನವನ್ನು ಬಳಸುವಂತೆ ನನ್ನ ಅಂಗರಕ್ಷಕ ನನ್ನನ್ನು ಒತ್ತಾಯಿಸಿದ. ನಾನು ಹಿಟ್ ಲಿಸ್ಟ್ ನಲ್ಲಿದ್ದೇನೆ ಹಾಗೂ ನನಗೆ ಕೇವಲ 12 ಗಂಟೆಗಳ ಕಾಲ ಮಾತ್ರ ಭದ್ರತೆಯ ಭರವಸೆ ನೀಡಲು ಸಾಧ್ಯ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ ನಂತರ, ಪರಿಸ್ಥಿತಿ ಪ್ರಕ್ಷುಬ್ಧಗೊಂಡಿತು. ಪೊಲೀಸ್ ಉಪ ಆಯುಕ್ತ ಹಿಮಾಂಶು ರಾಯ್ ನನಗಾಗಿ ವಿಮಾನ ನಿಲ್ದಾಣದ ಬಳಿ ಕಾಯುತ್ತಿದ್ದರು. ನಾವಿನ್ನು ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ.ನಿಮ್ಮ ಜೀವಕ್ಕೆ ಅಪಾಯವಿದೆ. ನಾವು ಮುಂದಿನ 12 ಗಂಟೆಗಳ ಕಾಲ ಮಾತ್ರ ನಿಮಗೆ ಸುರಕ್ಷತೆಯ ಖಾತರಿ ನೀಡಬಲ್ಲೆವು ಎಂದು ಹೇಳಿದರು. ನಂತರ, ಅಲ್ಲಿಂದ ನನ್ನನ್ನು ಬೆಂಗಾವಲಿನೊಂದಿಗೆ ಮಂಬೈನಲ್ಲಿನ ಫೋರ್ ಸೀಸನ್ಸ್ ಹೋಟೆಲ್ ಗೆ ಕರೆದೊಯ್ಯಲಾಯಿತು ಎಂದು ಲಲಿತ್ ಮೋದಿ ಹೇಳಿದ್ದಾರೆ.
ಅಂತೆಯೇ ಸುನಂದಾ ಪುಷ್ಕರ್ ಅವರ ಹತ್ಯೆಯ ಸುದ್ದಿ ಸಾರ್ವಜನಿಕವಾಗಿ ಪ್ರಕಟವಾದ ಕೂಡಲೇ ಶಶಿ ತರೂರ್ ಅವರನ್ನು ಭೇಟಿ ಮಾಡಿದ ಮೊದಲ ರಾಜಕಾರಣಿ ಸೋನಿಯಾ ಗಾಂಧಿ. ತರೂರ್ ಅವರೊಂದಿಗೆ ದನಿಗೂಡಿಸುವುದಕ್ಕಿಂತ ಹೆಚ್ಚಾಗಿ, ಇದು ತನಿಖಾ ಸಂಸ್ಥೆಗಳಿಗೆ ಒಂದು ಸಂದೇಶವಾಗಿತ್ತು, ಏಕೆಂದರೆ ಅವರು ಶಶಿ ತರೂರ್ ಸೋನಿಯಾ ಗಾಂಧಿ ಅವರ ಬೆಂಬಲವನ್ನು ಹೊಂದಿದ್ದರು.ಎಂದು ಲಲಿತ್ ಮೋದಿ ಹೇಳಿದ್ದಾರೆ.
ಇದೇ ಸಮಯದಲ್ಲಿ ಐಪಿಎಲ್ನ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡ ಲಲಿತ್ ಮೋದಿ, ಶಾರುಖ್ ಖಾನ್ ಅವರ ಖರೀದಿ ಮಾಡುವ ಮೊದಲ ಟೀಂ ಮುಂಬೈ ಟೀಮ್ ಆಗಿತ್ತು. ಆದರೆ ಅದನ್ನು ಅಂಬಾನಿ ಖರೀದಿಸಿದರು. ನಂತರ ಬೆಂಗಳೂರಿನ ಆರ್ಸಿಬಿ ತಂಡ ಖರೀದಿಗೆ ಮುಂದಾಗಿದ್ದರು ಅದನ್ನು ಮಲ್ಯ ಖರೀದಿಸಿದರು. ದೆಹಲಿ ಟೀಂ ಖರೀದಿಗೂ ಕೂಡ ಶಾರುಖ್ ಪ್ರಯತ್ನಿಸಿದ್ದರು. ಅದು ಜಿಎಂಆರ್ ಪಾಲಾಯಿತು. ಶಾರುಖ್ ಬಳಿ ಬಿಡ್ ಮಾಡಲು 70 ರರಿಂದ 80 ಮಿಲಿಯನ್ ಡಾಲರ್ ಮಾತ್ರ ಇತ್ತು ಹೀಗಾಗಿ ಕೊನೆಗೆ ಕೋಲ್ಕತ್ತಾ ಟೀಮ್ ಖರೀದಿಸಿದರು ಎಂದು ಹೇಳಿದ್ದಾರೆ.
ಇನ್ನೂ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಅಂಪೈರ್ಗಳನ್ನು ಫಿಕ್ಸ್ ಮಾಡುತ್ತಿದ್ದರು ಎಂದು ಕೂಡ ಲಲಿತ್ ಮೋದಿ ಆರೋಪ ಮಾಡಿದ್ದಾರೆ. ಚೆನ್ನೈ ಪಂದ್ಯಗಳಿಗೆ ಶ್ರೀನಿವಾಸನ್ ಚೆನ್ನೈ ಅಂಪೈರ್ಗಳನ್ನೆ ಹಾಕಿಸುತ್ತಿದ್ದರು ಎಂದು ಲಲಿತ್ ಮೋದಿ ಆರೋಪ ಮಾಡಿದ್ದಾರೆ.
ಇದೇ ವೇಳೆ, ನಾನು ಯಾವಾಗ ಬೇಕಾದರೂ ಭಾರತಕ್ಕೆ ಮರಳಬಹುದು ಎಂದು ಲಲಿತ್ ಮೋದಿ ಸಂದರ್ಶನದಲ್ಲಿ ಹೇಳಿಕೊಂಡಿದ್ದು, ಐಪಿಎಲ್ ಕ್ರೀಡಾಕೂಟದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಬೆನ್ನಿಗೇ, 2010ರಲ್ಲಿ ಲಲಿತ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಇದಾದ ನಂತರ, ಅವರು ಒಮ್ಮೆಯೂ ಭಾರತಕ್ಕೆ ಭೇಟಿ ನೀಡಿಲ್ಲ.