ಮೇಘನಾ ಶೆಟ್ಟಿ, ಶಿವಮೊಗ್ಗ
ತೂಕ ಇಳಿಸಬೇಕು ಅನ್ನೋದು ಎಷ್ಟು ಜನರ ಕನಸು? ನೋಡೋಕೆ ಸಿಕ್ಕಾಪಟ್ಟೆ ಸಣ್ಣ ಇದ್ರೂ ಪುಟ್ಟ ಹೊಟ್ಟೆ ಕಾಣಿಸಿಯೇ ಬಿಡುತ್ತದೆ, ಅದನ್ನು ಕರಗಿಸೋಕೆ ಮತ್ತೆ ವರ್ಕೌಟ್, ಡಯಟ್! ಇವರನ್ನು ನೋಡಿ ಹೊಟ್ಟೆ ಉರಿದುಕೊಳ್ಳೋ ಇನ್ನೊಂದು ವರ್ಗ ಇದೆ, ಚೂರು ಹೊಟ್ಟೆ ಇರೋದೆಲ್ಲ ದಪ್ಪನೇ ಅಲ್ಲ, ಅವರಷ್ಟು ಸಣ್ಣ ಆದ್ರೆ ಬೇಕಾದಷ್ಟಾಯ್ತು ಅಂದುಕೊಳ್ತಾರೆ. ಸಣ್ಣ ಆಗಬೇಕು ನಿಜ, ಆದರೆ ಅದಕ್ಕಾಗಿ ಪ್ರಯತ್ನ ಮಾಡೋದಕ್ಕೆ ರೆಡಿ ಇದ್ದೀರಾ?
ಸಂಜೆಯಾದರೆ ಸ್ನ್ಯಾಕ್ಸ್ ಬೇಕು, ಅದರಲ್ಲೂ ಮೈದಾ, ಎಣ್ಣೆಯಲ್ಲಿ ಕರಿದ ತಿಂಡಿಗಳೇ ಬೇಕು. ಜಿಮ್ ಇಷ್ಟ ಇಲ್ಲ,ಯೋಗಕ್ಕೆ ಏಳೋಕಾಗಲ್ಲ, ವಾಕಿಂಗ್ ಮಾಡೋದಕ್ಕೆ ಟೈಮ್ ಇಲ್ಲ.. ಇಂಥ ಆಲೋಚನೆ ಇರುವ ಯಾರು ಕೂಡ ಸಣ್ಣ ಆಗೋಕೆ ಸಾಧ್ಯವಿಲ್ಲ.
ಇನ್ನೊಂದು ರೀತಿ ಜನರಿದ್ದಾರೆ, ಫಿಟ್ನೆಸ್ ಬಗ್ಗೆ ಸಂಪೂರ್ಣ ಮಾಹಿತಿ, ಸದಾ ಫಿಟ್ನೆಸ್ ಬಗ್ಗೆ ಆಲೋಚನೆ, ಮೊಬೈಲ್‌ನಲ್ಲಿ ವ್ಯಾಯಾಮದ ವಿಡಿಯೋಗಳನ್ನು ನೋಡ್ತಾ ಚಿಪ್ಸ್ ತಿಂತಾರೆ! ಇಂಥವರೂ ಕೂಡ ತೂಕ ಇಳಿಸೋದಕ್ಕೆ ಆಗೋದಿಲ್ಲ.
ನಿಜವಾಗಿಯೂ ತೂಕ ಇಳಿಕೆಗೆ ಏನು ಮಾಡಬೇಕು?
- ಮೊದಲು ಮನಸ್ಸು ಮಾಡಿ, ಹೌದು, ನೀವು ತೂಕ ಆಮೇಲೆ ಇಳಿಸುವಿರಂತೆ, ಮೊದಲು ತೂಕ ಇಳಿಸುತ್ತೇನೆ, ಸಣ್ಣ ಆಗುತ್ತೇನೆ ಎಂದು ಮನಸ್ಸು ಮಾಡಿ.
- ಬೇರೆಯವರ ಒತ್ತಾಯಕ್ಕೆ ಸಣ್ಣ ಆಗುವ ನಿರ್ಧಾರಕ್ಕೆ ಬರಬೇಡಿ, ಈ ಮೋಟಿವೇಶನ್ ಅಲ್ಪಾವಧಿಗೆ ಮಾತ್ರ. ಸ್ವಲ್ಪ ಸಮಯ ಡಯಟ್ ವ್ಯಾಯಮ ಮಾಡಿ ನಂತರ ಮತ್ತದೇ ಹಳೇ ರೊಟೀನ್‌ಗೆ ಬರುತ್ತೀರಿ.
- ಜಿಮ್ ಅಥವಾ ಯೋಗ, ಏರೋಬಿಕ್ಸ್, ಝುಂಬಾ ಹೀಗೆ ಯಾವುದೇ ಕ್ಲಾಸ್‌ಗೆ ಹೋಗೋ ಮುನ್ನ ಬೆಳಗ್ಗೆ ಬೇಗ ಎದ್ದು ವಾಕಿಂಗ್ ಹೋಗಿ, ವಾಕ್ ಜೊತೆ ಜಾಗಿಂಗ್ ಮಾಡಿ. ಈ ಅಭ್ಯಾಸ ಆದ ನಂತರ ಜಿಮ್ ಸೇರಿ.
- ಒಂದೇ ಸಾರಿ ಸಂಪೂರ್ಣ ಡಯಟ್ ಮೊರೆ ಹೋಗಬೇಡಿ, ಇದು ವರ್ಕೌಟ್ ಆಗೋದಿಲ್ಲ. ಮೊದಲು ತಿನ್ನುವ ಕ್ವಾಂಟಿಟಿ ಕಡಿಮೆ ಮಾಡಿ. ನಾಲ್ಕು ಚಪಾತಿ ತಿನ್ನುತ್ತಿದ್ದರೆ ಮೂರು ಚಪಾತಿಗೆ ಬನ್ನಿ.
- ಊಟ ತಿಂಡಿ ಕಡಿಮೆ ಮಾಡೋದಕ್ಕೆ ಇಂಟ್ರೆಸ್ಟಿಂಗ್ ರೂಲ್ ಒಂದನ್ನು ಹಾಕಿಕೊಳ್ಳಿ. ನಿಮ್ಮ ಕೆಪಾಸಿಟಿ ಎಷ್ಟು? ಮೂರು ದೋಸೆ ತಿಂತೀರಾ? ಇಲ್ಲ ತಿನ್ನೋದಾದ್ರೆ ನಾಲ್ಕು ದೋಸೆ ತಿನ್ನಿ, ಇಲ್ಲವಾದರೆ ಎರಡು ತಿನ್ನಿ. ಈವನ್ ನಂಬರ್ ರೂಲ್ ಫಾಲೋ ಮಾಡಿ. ನಾಲ್ಕು ದೋಸೆ ತಿನ್ನೋಕೆ ಸಾಧ್ಯವೇ ಇಲ್ಲ ಅಂದರೆ ಎರಡು ದೋಸೆ ತಿಂದೂ ಆರಾಮಾಗಿ ಇರಬಹುದು.
- ಮೊದಲು ಜಂಕ್ ಫುಡ್‌ಗೆ ಕಡಿವಾಣ ಹಾಕಿ, ನಾನು ಮೈದಾ ಆಹಾರ ತಿನ್ನೋದಿಲ್ಲ, ಎಣ್ಣೆಯಲ್ಲಿ ಕರಿದ ಪದಾರ್ಥ ಮುಟ್ಟೋದಿಲ್ಲ, ನೀವೇ ಗಮನಿಸಿ ಪ್ರತಿ ಜಂಕ್ ಫುಡ್ ಬೇಸ್ ಮೈದಾ ಹಾಗೂ ಎಣ್ಣೆ, ಪಿಝಾ, ಬರ್ಗರ್, ಪ್ಯಾನ್‌ಕೇಕ್, ಫ್ರೆಂಚ್ ಫ್ರೈಸ್, ಪಾನಿಪುರಿ, ಮಸಾಲಪುರಿ, ಗೋಬಿ, ನೂಡಲ್ಸ್ ಎಲ್ಲಿದೆ ಮೈದಾ ಹಾಗೂ ಎಣ್ಣೆಯಿಲ್ಲದ ಸ್ನ್ಯಾಕ್ಸ್?
- ಪ್ರತಿ ಬಾರಿ ಡಯಟ್ ಅಥವಾ ತೂಕ ಇಳಿಕೆ ಪ್ರೊಸೆಸ್‌ನಲ್ಲಿ ಇದ್ದಾಗಲೂ ಇದನ್ನು ನನಗಾಗಿ ನಾನು ಮಾಡಿಕೊಳ್ಳುತ್ತಿದ್ದೇನೆ, ಯಾವ ಒತ್ತಡವೂ ಇಲ್ಲ. ನನಗೆ ಇಷ್ಟವಿದ್ದು ನಾನು ಡಯಟ್ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳಿ.
- ಸಾಧ್ಯವಾದಷ್ಟು ಊಟ ತಿಂಡಿಯ ವಿಡಿಯೋಗಳನ್ನು ನೋಡೋದು, ರೆಸ್ಟೋರೆಂಟ್‌ಗಳಿಗೆ ಹೋಗೋದನ್ನು ಅವಾಯ್ಡ್ ಮಾಡಿ. ಪರ್ಯಾಯ ಸ್ನ್ಯಾಕ್ಸ್ ಯಾವುದು ಯೋಚಿಸಿ.
- ಎಷ್ಟಾಗುತ್ತದೋ ಅಷ್ಟು ವಾಕ್ ಮಾಡುತ್ತಲೇ ಇರಿ. ಸಣ್ಣ ಸ್ಟೆಪ್ಸ್‌ನಿಂದ ವೇಟ್ ಲಾಸ್ ಜರ್ನಿ ಆರಂಭಿಸಿ. ತೂಕ ಇಳಿಕೆ ಬರೀ ಬಾಹ್ಯ ಸೌಂದರ್ಯಕ್ಕಲ್ಲ, ಆರೋಗ್ಯವೂ ಸುಧಾರಿಸುತ್ತದೆ ನೆನಪಿರಲಿ.