ನಾನೊಬ್ಬನೇ ಬಾಂಬ್ ತಯಾರಿಸಿದೆ: ಪೊಲೀಸರಿಗೆ ಹೇಳಿಕೆ ನೀಡಿದ ಡೊಮಿನಿಕ್ ಮಾರ್ಟಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿಬೀಳಿಸಿದ್ದ ಕೇರಳದ ಕಲಮಸ್ಸೇರಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಆರೋಪಿ ಡೊಮಿನಿಕ್ ಮಾರ್ಟಿನ್ ಅಂದಿನ ಕ್ಷಣಗಳನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

ತಾನೊಬ್ಬನೇ ಬಾಂಬ್ ತಯಾರಿಸಿದ್ದಾಗಿ ಆತ ಹೇಳಿಕೊಂಡಿದ್ದು, 10:45 ರ ಸುಮಾರಿಗೆ ಕನ್ವಶ್ಶನ್ ಸೆಂಟರ್‌ಗೆ ಬಂದ ಆತ ಸ್ಪೋಟ ನಡೆಸಿ ನೇರ ಕೊರಟ್ಟಿಯ ಮಿರಾಕಲ್ ರೆಸಿಡೆನ್ಸಿಗೆ ತಲುಪಿದ್ದಾನೆ. ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಆರೋಪಿ ಮಾರ್ಟಿನ್ ಮಾಲೀಕತ್ವದ ಫ್ಲಾಟ್‌ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಬಗ್ಗೆ ಸಮೀಪದ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಸಧ್ಯ ಈ ಫ್ಲ್ಯಾಟ್‌ಗೆ ಪೊಲೀಸ್ ಕಣ್ಗಾವಲು ಏರ್ಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!