‘ನಾನು ಸೆಲೆಬ್ರಿಟಿ ಇರಬಹುದು ಆದರೆ ಪ್ಲ್ಯಾನ್ ಮಾಡಿ ಜೀವನ ಮಾಡೋಕಾಗಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸಾಕಷ್ಟು ನಟಿಯರು ಇನ್ನೂ ಮದುವೆಯಾಗಿಲ್ಲ, ಮದುವೆಯಾದವರು ಮಕ್ಕಳ ಬಗ್ಗೆ ಆಲೋಚನೆ ಮಾಡಿಲ್ಲ. ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡ ನಂತರ ಮಗು ಬಗ್ಗೆ ಆಲೋಚನೆಗೂ ಸಮಯ ಇಲ್ಲ ಎನ್ನುವುದು ಹಲವರ ಅಭಿಪ್ರಾಯ. ಆದರೆ ಆಲಿಯಾ ಭಟ್ ತಮ್ಮ ಕರಿಯರ್‌ನ ಪೀಕ್‌ನಲ್ಲಿ ಇರುವಾಗಲೇ ಮಗು ಹೊಂದಿದ್ದಾರೆ.

ಗಂಗೂಬಾಯಿ ಕಾಥಿಯಾವಾಡಿ, ಡಾರ್ಲಿಂಗ್ಸ್ ಹಾಗೂ ಬ್ರಹ್ಮಾಸ್ತ್ರ ಮುಗಿಸಿದ್ದ ಆಲಿಯಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಇದೇ ವೇಳೆಯಲ್ಲೇ ಆಲಿಯಾ ಮಗು ಪಡೆಯೋಕೆ ಇಚ್ಛಿಸಿದ್ದರು. ಈ ಬಗ್ಗೆ ಆಲಿಯಾ ಮಾತನಾಡಿದ್ದು, ಯಾರೇ ಆಗಲಿ ಜೀವನವನ್ನು ಪ್ಲಾನ್ ಮಾಡೋದಕ್ಕೆ ಆಗೋದಿಲ್ಲ. ದಿನಗಳು ಕಳೆದ ರೀತಿ ನಾವು ಹೋಗಬೇಕಷ್ಟೆ ಎಂದಿದ್ದಾರೆ.

ಸಾಮಾನ್ಯವಾಗಿ ಕರಿಯರ್ ಪೀಕ್‌ನಲ್ಲಿರುವಾಗ ಯಾವ ಹೀರೋಯಿನ್‌ಗಳು ರಿಸ್ಕ್ ತೆಗೆದುಕೊಂಡಿಲ್ಲ. ಆಲಿಯಾ ಬಗ್ಗೆಯೂ ಸಾಕಷ್ಟು ಆಶ್ಚರ್ಯ ವ್ಯಕ್ತವಾಗಿತ್ತು. ಮಗುವಿನ ನಂತರ ಬೇಡಿಕೆ ಕಮ್ಮಿ ಎನ್ನೋ ಮಾತನ್ನು ನಂಬದ ಆಲಿಯಾ, ಪ್ಲಾನ್ ಮಾಡಿ ಜೀವನ ಮಾಡೋದಿಲ್ಲ. ಜೀವನ ಪ್ಲಾನ್ ಮಾಡಿದಂತೆ ಬದುಕುತ್ತೇನೆ ಎಂದು ಹೇಳಿದ್ದಾರೆ. ನನ್ನ ಆಯ್ಕೆ ಯಾವಾಗಲೂ ಹೃದಯದ್ದೇ ಆಗಿರುತ್ತದೆ ಎಂದಿದ್ದಾರೆ.
ನನ್ನ ಕೆರಿಯರ್ ಮೇಲೆ ಪರಿಣಾಮ ಬಿದ್ದರೂ ನನಗೆ ಬೇಸರ ಇಲ್ಲ. ಇದು ನನ್ನ ಬೆಸ್ಟ್ ಡಿಸಿಶನ್. ನಾನು ಖುಷಿಯಾಗಿದ್ದೇನೆ ಎಂದು ಆಲಿಯಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!