ರಜೌರಿಯಲ್ಲಿ ಉಗ್ರ ದಾಳಿ: ಎಲ್‌ಜಿ ಆಡಳಿತದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಜೌರಿ ಜಿಲ್ಲೆಯ ಧಾಂಗ್ರಿಯಲ್ಲಿ ಭಾನುವಾರ ನಡೆದ ದಾಳಿಯ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು. ಜಮ್ಮು ವಿಭಾಗದ ಧಾಂಗ್ರಿ ಪರ್ವತದ ಹಳ್ಳಿಯ ಮುಖ್ಯ ಚೌಕ್‌ನಲ್ಲಿ ಸ್ಥಳೀಯರು ಜಮಾಯಿಸಿ, ಜೆ-ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಮ್ಮ ಬೇಡಿಕೆಗಳನ್ನು ಆಲಿಸಬೇಕೆಂದು ಒತ್ತಾಯಿಸಿ ಪೊಲೀಸರು ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಡಳಿತದ ವಿರುದ್ಧ ಸ್ಥಳೀಯರು ರಾಜೌರಿ ಬಂದ್‌ಗೆ ಕರೆ ನೀಡಿದ್ದಾರೆ.

ಪೊಲೀಸರ ಪ್ರಕಾರ, ಭಾನುವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಪೊಲೀಸರು ರಾತ್ರಿ 8.30ರ ಸುಮಾರಿಗೆ ಸ್ಥಳಕ್ಕೆ ತಲುಪಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗ್ರಾಮದ ಮುಖ್ಯಸ್ಥರು ಇಲ್ಲಿನ ಆಡಳಿತದ ವೈಫಲ್ಯಗಳನ್ನು ಎತ್ತಿ ತೋರಿಸಿದರು. ಪೊಲೀಸ್ ಮತ್ತು ನಾಗರಿಕ ಆಡಳಿತವನ್ನು ಪುನರ್‌ರಚಿಸಬೇಕೆಂದು ಇಲ್ಲಿಗೆ ಸೇನೆಯನ್ನು ನಿಯೋಜಿಸುವಂತೆ ಒತ್ತಾಯಿಸಿದರು. ವಿಡಿಸಿ (ಗ್ರಾಮ ರಕ್ಷಣಾ ಸಮಿತಿಗಳು) ಮತ್ತಷ್ಟು ಬಲಪಡಿಸಲು ಮತ್ತು ಇಲ್ಲಿನ ಜನರಿಗೆ ವಿಡಿಸಿ ಬಂದೂಕುಗಳನ್ನು ಒದಗಿಸುವಂತೆ ನಾವು ಕೇಂದ್ರ ಮತ್ತು ಎಲ್-ಜಿಗೆ ವಿನಂತಿಸುತ್ತೇವೆ. ಇದರಿಂದಾಗಿ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಏಕೆಂದರೆ ಪಡೆಗಳು ಇಲ್ಲಿಗೆ ತಲುಪುವ ವೇಳೆಗೆ ಇಡೀ ಪ್ರದೇಶದಲ್ಲಿದ್ದ ಜನರನ್ನು ಅವರ ಸಾಯಿಸುತ್ತಿದ್ದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!