Monday, March 27, 2023

Latest Posts

“ಐ ಮಿಸ್ ಯು ಆಯಿ” ಅಗಲಿದ ತಾಯಿ ಕುರಿತು ರಾಖಿ ಭಾವನಾತ್ಮಕ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಿಯಾಲಿಟಿ ಟಿವಿ ತಾರೆ ರಾಖಿ ಸಾವಂತ್ ಅವರ ತಾಯಿ ಜಯಾ ಭೇದಾ ಅವರ ನಿಧನದಿಂದ ತೀವ್ರ ದುಃಖದಲ್ಲಿದ್ದಾರೆ.
ಎಂಡೊಮೆಟ್ರಿಯಲ್ ಕ್ಯಾನ್ಸರ್ ನಿಂದಾಗಿ ರಾಖಿಯ ತಾಯಿ ಮುಂಬೈನ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು.

ಇನ್‌ಸ್ಟಾಗ್ರಾಮ್‌ನಲ್ಲಿ ದುರದೃಷ್ಟಕರ ಸುದ್ದಿಯನ್ನು ಹಂಚಿಕೊಂಡ ರಾಖಿ, ಐ ಮಿಸ್ ಯು ಆಯಿ. ಇಂದು ನನ್ನ ತಾಯಿಯ ಕೈ ನನ್ನ ತಲೆಯ ಮೇಲಿತ್ತು. ನನಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗ ನನಗೆ ಯಾರೂ ಇಲ್ಲ ಎಂದು ಭಾವುಕ ಪೋಸ್ಟ್‌ ಮಾಡಿದ್ದಾರೆ.

ಭಾವನಾತ್ಮಕ ಟಿಪ್ಪಣಿಯ ಜೊತೆಗೆ, ರಾಖಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕ್ಲಿಪ್‌ನಲ್ಲಿ, ರಾಖಿ ಆಸ್ಪತ್ರೆಯ ನೆಲದ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವಾಗ ಆಕೆಯ ತಾಯಿ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ರಾಖಿ ಅಸಹನೀಯವಾಗಿ ಅಳುತ್ತಿರುವುದು ಇದೆ.

ರಾಖಿ ಅವರ ತಾಯಿಯ ನಿಧನದ ಸುದ್ದಿ ತಿಳಿದ ನಂತರ, ಚಲನಚಿತ್ರ ನಟ-ನಟಿಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ರಾಖಿ ಗಟ್ಟಿಯಾಗಿರಿ ನಿಮ್ಮ ಜೊತೆ ನಾವಿದ್ದೇವೆ ಎಂದು ಟ್ವೀಟ್‌ ಮಾಡುತ್ತಿದ್ದಾರೆ. ರಾಖಿಯ ತಾಯಿ ಸುಮಾರು ಮೂರು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆಕೆಗೆ 73 ವರ್ಷ. ‘ಬಿಗ್ ಬಾಸ್’ ನಲ್ಲಿದ್ದಾಗಲೂ, ರಾಖಿ ತನ್ನ ತಾಯಿಯ ವೈದ್ಯಕೀಯ ವೆಚ್ಚವನ್ನು ಭರಿಸಲು ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ ಎಂದು ಬಹಿರಂಗಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!