Tuesday, March 28, 2023

Latest Posts

2025ರಲ್ಲಿ ಚೀನಾದೊಂದಿಗೆ ಯುದ್ಧ ಮಾಡೋ ಸನ್ನಿವೇಶ ಬರಬಹುದು ಅಂತಿದಾರೆ ಅಮೆರಿಕ ವಾಯುಸೇನಾ ಜನರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದೊಂದಿಗೆ ಅಮೆರಿಕದ ತಿಕ್ಕಾಟ ಮರೆಯಲ್ಲಿರುವ ಸಂಗತಿಯೇನಲ್ಲ. ಸೆಮಿಕಂಡಕ್ಟರ್‌ ವಿಷಯದಲ್ಲಂತೂ ಈ ಎರಡೂ ದೇಶಗಳ ನಡುವೆ ಹಣಾಹಣಿ ನಡೆಯುತ್ತಿದೆ. ಚೀನಾದ ಸೆಮಿಕಂಡಕ್ಟರ್‌ ಗಳಿಗೆ ನಿಷೇಧ ಹೇರುವ ಮೂಲಕ ಅಮೆರಿಕವು ಎಲೆಕ್ಟ್ರಾನಿಕ್‌ ಯುದ್ಧವೊಂದನ್ನು ನಡೆಸುತ್ತಿದೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ಚೀನಾದೊಂದಿಗಿನ ತಿಕ್ಕಾಟದ ಕುರಿತು ಅಮೆರಿಕದ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿರೋದರ ಕುರಿತು ವರದಿಗಳು ಹರಿದಾಡುತ್ತಿವೆ

“2025ರಲ್ಲಿ ಅಮೆರಿಕವು ಚೀನಾದೊಂದಿಗೆ ಯುದ್ಧಕ್ಕಿಳಿಯಬೇಕಾದ ಸನ್ನಿವೇಶ ಬರಬಹುದು” ಎಂದು ಅಮೆರಿಕದ ವಾಯುಸೇನೆಯ ಜನರಲ್‌ ಮೈಕ್ ಮಿನಿಹಾನ್ ಹೇಳಿದ್ದಾರೆ. ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಚೀನಾದೊಂದಿಗೆ ನಾವು ಯುದ್ಧ ಹೋರಾಡುವ ಲಕ್ಷಣಗಳಿವೆ ಎಂದು ಮೆಮೊವೊಂದರಲ್ಲಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯೀಟರ್ಸ್‌ ವರದಿ ಮಾಡಿದೆ.

ಅಮೆರಿಕದ ವಾಯು ಸೇನೆಯ ಏರ್ ಮೊಬಿಲಿಟಿ ಕಮಾಂಡ್‌ನ ಮುಖ್ಯಸ್ಥರಾಗಿರುವ ಮೈಕ್ ಮಿನಿಹಾನ್ “ನನ್ನ ಈ ಮಾತುಗಳು ಅಮೆರಿಕದ ಮಿಲಿಟರಿ ಇಲಾಖೆಯನ್ನು ಪ್ರತಿನಿಧಿಸುವುದಿಲ್ಲ. ಆದರೆ ಚೀನಾದೊಂದಿಗೆ ನೇರ ಯುದ್ಧಕ್ಕಿಳಬಹುದಾದ ಸನ್ನಿವೇಶ ಬರಬಹುದು ಎಂದು ನನ್ನ ಒಳಮನಸ್ಸು ಹೇಳುತ್ತಿದೆ. ನನ್ನ ಈ ಅಭಿಪ್ರಾಯ ತಪ್ಪಾಗಿಯೂ ಇರಬಹುದು. ಆದರೆ ಚೀನಾವು ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುವ ತೈವಾನ್‌ನ ಮೇಲೆ ನಿಯಂತ್ರಣವನ್ನು ಸಾಧಿಸಲು ಚೀನಾದ ಸಂಭವನೀಯ ಪ್ರಯತ್ನದ ಬಗ್ಗೆ US ಮಿಲಿಟರಿಯ ಉನ್ನತ ಮಟ್ಟದಲ್ಲಿ ಕಾಳಜಿಯನ್ನು ತೋರಿಸುತ್ತದೆ. ಯುನೈಟೆಡ್ ಸ್ಟೇಟ್ಸ್ ಮತ್ತು ತೈವಾನ್ ಎರಡೂ 2024 ರಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸುತ್ತವೆ, ಇದು ಚೀನಾಕ್ಕೆ ಮಿಲಿಟರಿ ಕ್ರಮ ಕೈಗೊಳ್ಳಲು ಅವಕಾಶವನ್ನು ಸೃಷ್ಟಿಸುತ್ತದೆ” ಎಂದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!