I.N.D.I.A. ಮೈತ್ರಿಕೂಟದ ಸಭೆಗೆ ಮಮತಾ ಬ್ಯಾನರ್ಜಿ ಗೈರು?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಗಂತ ವರದಿ, ವಿಜಯಪುರ:

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಇದೀಗ ರಾಜಕೀಯ ಪಾರ್ಟಿ ಗಳು ಲೋಕಸಭೆಯತ್ತ ಚಿತ್ತ ಹರಿಸಿದ್ದು, ಹೀಗಾಗಿ I.N.D.I.A ಮೈತ್ರಿಕೂಟದ ಸಭೆ ಡಿ.06 ರಂದು ನಡೆಯಲಿದೆ.

ಆದ್ರೆ ಈ ಬಾರಿ ಕಾಂಗ್ರೆಸ್ ನ ಕಳಪೆ ಸಾಧನೆ ಬಗ್ಗೆ I.N.D.I.A ಮೈತ್ರಿಕೂಟದ ಸದಸ್ಯರು ಹೇಳಿಕೆ ನೀಡುತ್ತಿದ್ದು ಹಾಗಾಗಿ ಯಾರು ಸಭೆಗೆ ಗೈರಾಗಲಿದ್ದಾರೆ ಎಂದು ಕಾದುನೋಡಬೇಕಿದೆ.

ಈ ನಡುವೆ ಡಿ.06 ರ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗುವ ಸಾಧ್ಯತೆಗಳಿವೆ. ಇದೇ ದಿನದಂದು ಉತ್ತರ ಬಂಗಾಳದಲ್ಲಿ ಈಗಾಗಲೇ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ ಎಂದು ಮಮತಾ ಬ್ಯಾನರ್ಜಿ ಕಾರಣ ನೀಡಿದ್ದಾರೆ. I.N.D.I.A ಮೈತ್ರಿಕೂಟದ ಸಭೆಯ ಬಗ್ಗೆ ನನಗೆ ಅರಿವಿಲ್ಲ. ಆದ್ದರಿಂದಲೇ ನಾನು ಉತ್ತರ ಬಂಗಾಳದಲ್ಲಿ ಹಲವು ಕಾರ್ಯಕ್ರಮಗಳಿಗೆ ತೆರಳುವುದು ನಿಗದಿಯಾಗಿದೆ.

ಉತ್ತರ ಬಂಗಾಳಕ್ಕೆ ತೆರಳಲು ನನಗೆ ಏಳು ದಿನಗಳ ಕಾರ್ಯಕ್ರಮವಿದೆ. ಸಭೆ ಬಗ್ಗೆ ನನಗೆ ತಿಳಿದಿದ್ದರೆ, ನಾನು ಈ ಕಾರ್ಯಕ್ರಮವನ್ನೇಕೆ ನಿಗದಿಪಡಿಸುತ್ತಿದ್ದೆ? ಸಭೆಯ ಬಗ್ಗೆ ಮಾಹಿತಿ ಇದ್ದಿದ್ದರೆ, ನಾನು ಖಂಡಿತವಾಗಿಯೂ ಅದಕ್ಕೆ ಹೋಗುತ್ತಿದ್ದೆ. ಆದರೆ ನಮಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾನು ಉತ್ತರ ಬಂಗಾಳ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ವ್ಯಕ್ತಿಗತವಾಗಿ ಅಷ್ಟೇ ಅಲ್ಲದೇ ಆಕೆಯ ಪಕ್ಷ ತೃಣಮೂಲ ಕಾಂಗ್ರೆಸ್ ಕೂಡ ಸಭೆಯಿಂದ ಹೊರಗುಳಿಯಬಹುದು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!