ತೆಲಂಗಾಣದ ನೂತನ ಸಿಎಂ ಯಾರು?: ದೆಹಲಿಗೆ ಪ್ರಯಾಣಿಸಿದ ಡಿಕೆ ಶಿವಕುಮಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದಲ್ಲಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ (Congress) ಪಕ್ಷಕ್ಕೆ ಇದೀಗ ಸಿಎಂ ಆಯ್ಕೆ ದೊಡ್ಡ ತಲೆನೋವು ಆಗಿದೆ.
ಸೋಮವಾರ ಸಿಎಲ್‌ಪಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರೊಂದಿಗೆ ಎಐಸಿಸಿ ವೀಕ್ಷಕರಾಗಿ ದೀಪದಾಸ್ ಮುನ್ಶಿ, ಜಾರ್ಜ್, ಅಜಯ್, ಮುರಳೀಧರನ್ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿದ್ದರು.

40 ನಿಮಿಷಗಳ ಕಾಲ ನಡೆದ ಸಿಎಲ್‌ಪಿ ಸಭೆಯಲ್ಲಿ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ತಿಳಿದುಕೊಂಡರು. ಸಿಎಂ ರೇಸ್ ನಲ್ಲಿದ್ದವರ ಜತೆಯೂ ಮಾತುಕತೆ ನಡೆಸಿದರು. ಆದರೆ, ಸಿಎಂ ಹೆಸರು ನಿರ್ಧಾರಕ್ಕೆ ಬರಲಿಲ್ಲ.

ಹೀಗಾಗಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ವೀಕ್ಷಕರು ಕೂಡ ನಾಳೆ ದೆಹಲಿ ತಲುಪಲಿದ್ದಾರೆ. ಆ ಬಳಿಕ ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ಗೆಲುವು ಖಚಿತವಾದ ಕೆಲವೇ ದಿನಗಳಲ್ಲಿ ಅದರ ರಾಜ್ಯ ಘಟಕದ ಮುಖ್ಯಸ್ಥ, ಯಶಸ್ಸನ್ನು ಸಂಘಟಿಸಿದ ಕೀರ್ತಿಗೆ ಪಾತ್ರರಾದ ರೇವಂತ್ ರೆಡ್ಡಿ ಅವರು ಉನ್ನತ ಹುದ್ದೆಗೆ ಹೆಚ್ಚು ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು. ಆದಾಗ್ಯೂ 54 ವರ್ಷದ, BRS ಮತ್ತು ಬಿಜೆಪಿಯ ಯುವ ವಿಭಾಗದ ಮಾಜಿ ಸದಸ್ಯ ರೇವಂತ್ ರೆಡ್ಡಿ ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನೊಳಗೊಂಡ ಸಮಿತಿಯು ಪಕ್ಷದ ಚುನಾವಣಾ ವೀಕ್ಷಕರನ್ನು ಭೇಟಿ ಮಾಡಿದ ನಂತರವೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಘೋಷಿಸಲಿದ್ದಾರೆ ಎಂದು ಈ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!