ಪುನೀತ್​ ನ ಹೆಮ್ಮೆಯ ಗೆಳೆಯನಾಗಿ ನಾನು ಇಲ್ಲಿ ನಿಂತಿದ್ದೇನೆ: ಜ್ಯೂ.ಎನ್​ಟಿಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಳೆಯ ನಡುವೆಯೂ ಇಂದು ವಿಧಾನಸೌಧ ಮುಂಭಾಗದಲ್ಲಿ ಕರ್ನಾಟಕದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಈ ವೇಳೆ ಮಾತನಾಡಿದ ತೆಲುಗಿನ ಖ್ಯಾತ ನಟ ಜ್ಯೂ.ಎನ್​ಟಿಆರ್, ಯಾವುದೇ ಅಹಂಕಾರವಿಲ್ಲದೇ ಮತ್ತು ಯುದ್ಧವನ್ನೇ ಮಾಡದೇ ಒಂದು ರಾಜ್ಯವನ್ನೇ ಗೆದ್ದಿರುವ ರಾಜಕುಮಾರ್ ಯಾರಾದರೂ ಇದ್ದರೆ ಅದು ಪುನೀತ್​ ರಾಜ್​ಕುಮಾರ್​ ಮಾತ್ರ ಎಂದು ಬಣ್ಣಿಸಿದರು.

ಮೊದಲಿಗೆ ಎಲ್ಲ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಶುಭ ಕೋರಿದ ಆಸವರು , ಅಲ್ಲದೇ, ಇಂದು ನಾನು ಇಲ್ಲಿ ನಿಂತಿರುವುದು ಪುನೀತ್​ ಅವರು ಹೆಮ್ಮೆಯ ಗೆಳೆಯನಾಗಿ ನಾನು ಇಲ್ಲಿ ನಿಂತಿದ್ದೇನೆ ಎಂದು ಹೇಳಿದರು.

ಅವರ ನಗುವಿನಲ್ಲಿ ಇದ್ದಂತ ಶ್ರೀಮಂತಿಕೆ ನಾನು ಎಲ್ಲಿಯೂ ನೋಡಲಿಲ್ಲ. ಅದಕ್ಕೆ ಅವರನ್ನು ನಗುವಿನ ಒಡೆಯ ಎನ್ನುವುದು. ನನಗೆ ಒಂದು ಅನಿಸುತ್ತಿದೆ ಇವತ್ತು ಪುನೀತ್ ರಾಜ್ ಕುಮಾರ್ ಅವರಿಗೆ ನೀಡುತ್ತಿರುವಂತ ಕರ್ನಾಟಕ ರತ್ನ ಪ್ರಶಸ್ತಿ ಕೇವಲ ಕರ್ನಾಟಕ ರತ್ನ ಪ್ರಶಸ್ತಿಯಲ್ಲ. ಅದು ಕರ್ನಾಟಕ ರತ್ನವೇ ಪುನೀತ್ ರಾಜ್ ಕುಮಾರ್ ಅರ್ಥವಾಗಿದೆ. ಇದೊಂದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!