ನಾನು 1996ರಲ್ಲಿ ಪ್ರಯತ್ನಿಸಿ ವಿಫಲನಾಗಿದ್ದೆ, ಬಿಜೆಪಿ ಸರ್ಕಾರ ಅದೃಷ್ಟವಂತರು: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ದೇವೇಗೌಡ ಖುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿರುವುದಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಸ್ವಾಗತಿಸಿದ್ದಾರೆ .

ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಇದು ದೇಶದ ಮಹಿಳೆಯ ಹಿತದೃಷ್ಟಿಯಿಂದ ಕೈಗೊಂಡ ಸಮಯೋಚಿತ ನಿರ್ಧಾರ ಎಂದರು.

ನಾನು ಪ್ರಧಾನಿಯಾಗಿದ್ದಾಗ 1996ರಲ್ಲಿ ಈ ಮಸೂದೆಯನ್ನು ಮತ್ತೆ ತಂದಿದ್ದೆ. ಆದರೆ ಅಂಗೀಕಾರಗೊಳಿಸುವಲ್ಲಿ ವಿಫಲನಾಗಿದ್ದೆ. ನಂತರ ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್​ ಅವರ ಅವಧಿಯಲ್ಲಿ ಈ ವಿಷಯದ ಎರಡು ಬಾರಿ ಪ್ರಸ್ತಾಪವಾಗಿತ್ತು. ಆದರೆ ಎರಡು ಬಾರಿಯೂ ಅವರ ಸರ್ಕಾರ ಈ ವಿಷಯದಲ್ಲಿ ಬಹುಮತ ಪಡೆಯಲಿಲ್ಲ. ಆದರೆ ಬಿಜೆಪಿ ಸರ್ಕಾರ ಅದೃಷ್ಟವಂತರು. ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ, ನಗುತ್ತಲೇ ಪ್ರತಿಕ್ರಿಯಿಸಲು ನಿರಾಕರಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತನಾಡುತ್ತಾ, ಈ ಬಗ್ಗೆ ನಾನು ಸದನದಲ್ಲೇ ಹೇಳಿದ್ದೇನೆ. ತಮಿಳುನಾಡು ಅಥವಾ ಕರ್ನಾಟಕಕ್ಕೆ ಸೇರದ ಐವರು ಸದಸ್ಯರನ್ನು ಕಳುಹಿಸಲಿ. ಅಲ್ಲಿ ಬಂದು ಪರಿಸ್ಥಿತಿ, ಬೆಳೆ ಸ್ಥಿತಿ, ಸಂಗ್ರಹಣೆಯ ಬಗ್ಗೆ ಅಧ್ಯಯನ ಮಾಡಲಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!