ನನಗೆ ಮಕ್ಕಳು ಬೇಕು, ಗಂಡನನ್ನು ಬಿಡುಗಡೆ ಮಾಡಿ: ಜೈಲು ಅಧಿಕಾರಿಗೆ ಬಂತು ಕೈದಿಯ ಪತ್ನಿಯ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜೈಲಿನಲ್ಲಿರುವ ಗಂಡನ ಬಿಡುಗಡೆಗೆ ಮಹಿಳೆಯೊಬ್ಬಳು ಜೈಲು ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾಳೆ.

ಮದುವೆಯಾದ ಸಂದರ್ಭದಲ್ಲಿ ಗಂಡ ಜೈಲು ಸೇರಿದ್ದರಿಂದ ನನಗೆ ಗರ್ಭ ಧರಿಸಲು ಸಾಧ್ಯವಾಗಿಲ್ಲ. ಹೀಗಾಗಿ ನನ್ನ ಗಂಡನನ್ನು ಪೆರೋಲ್ ಮೇಲೆ ಕಳುಹಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾಳೆ.

ಮಧ್ಯಪ್ರದೇಶದ ಶಿವಪುರಿ ಮೂಲದ ದಾರಾ ಸಿಂಗ್ ಜಾತವ್ ಎಂಬಾತ ಕಳೆದ ಏಳು ವರ್ಷಗಳಿಂದ ಗ್ವಾಲಿಯರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿ. ಮದುವೆಯಾದ ಸಂದರ್ಭದಲ್ಲಿ ಈತ ಕೊಲೆ ಪ್ರಕರಣದ ಮೂಲಕ ಜೈಲು ಸೇರಿದ್ದ. ಇದರಿಂದ ಹೆಂಡತಿ ಒಬ್ಬಂಟಿಯಾಗಿ ಜೀವನ ದೂಡಬೇಕಾದ ಸ್ಥಿತಿ ಬಂದೊದಗಿತ್ತು. ಇದೀಗ ಈತನ ಪತ್ನಿ, ಮದುವೆಯಾಗಿ ಏಳು ವರ್ಷಗಳು ಕಳೆದರೂ ನನಗೆ ಮಕ್ಕಳಿಲ್ಲ. ನಾನೀಗ ಗರ್ಭ ಧರಿಸಬೇಕು. ಇದಕ್ಕಾಗಿ ನನ್ನ ಗಂಡನನ್ನು ಪೆರೋಲ್ ಮೂಲಕ ಜೈಲಿನಿಂದ ಕಳುಹಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದಾಳೆ.

ಇನ್ನು ಮಗನ ಬಂಧನದಿಂದ ನಮಗೆ ಮದುವೆಯ ಸಂತಸವನ್ನು ಸಂಭ್ರಮಿಸಲು ಸಾಧ್ಯವಾಗಿಲ್ಲ. ಇದೀಗ ನಮಗೆ ವಯಸ್ಸಾಗಿದೆ. ಪತ್ನಿ ಅನಾರೋಗ್ಯ ಪೀಡಿತಳಾಗಿದ್ದು, ಮೊಮ್ಮಗ ಬೇಕೆಂದು ಬಯಸಿದ್ದಾಳೆ. ಹೀಗಾಗಿ ಮಗನನ್ನು ಕೆಲ ದಿನಗಳ ಕಾಲ ಜೈಲಿನಿಂದು ಕಳುಹಿಸಿಕೊಡುವಂತೆ ಕೈದಿ ದಾರಾ ಸಿಂಗ್ ತಂದೆ ಕರೀಂ ಸಿಂಗ್ ಜಾತವ್ ಹೇಳಿಕೊಂಡಿದ್ದಾರೆ.

ಪತ್ರ ಓದಿದ ಅಧಿಕಾರಿ, ಕೈದಿಯ ಬಿಡುಗಡೆಗೆ ಸಂಬಂಧಿಸಿದ ಮನವಿ ಪತ್ರವನ್ನು ಸದ್ಯ ಶಿವಪುರಿ ಎಸ್​ಪಿ ಅವರ ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ. ಈ ನಡುವೆ ಗ್ವಾಲಿಯರ್ ಸೆಂಟ್ರಲ್ ಜೈಲ್ ಸೂಪರಿಂಟೆಂಡೆಂಟ್ ವಿದಿತ್ ಸಿರ್ವಯ್ಯ ಪ್ರತಿಕ್ರಿಯಿಸಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಶಿಕ್ಷೆ ಎರಡು ವರ್ಷ ಪೂರ್ಣಗೊಂಡ ಬಳಿಕ ನಡವಳಿಕೆಯು ಆಧಾರದ ಮೇಲೆ ಪೆರೋಲ್‌ ಪಡೆಯಲು ಅರ್ಹರಾಗಿರುತ್ತಾರೆ. ಪೆರೋಲ್ ನೀಡುವುದು ಅಥವಾ ನೀಡದಿರುವ ಬಗ್ಗೆ ಜಿಲ್ಲಾಧಿಕಾರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!