ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಲೀಸ್ ಮನೆ, ಮಕ್ಕಳು, ಗಂಡ ಎಲ್ಲಾನೂ ಬಿಟ್ಟು ಬಂದಿದಿನಿ, ನೀನೇ ನನ್ನ ಮದ್ವೆ ಆಗ್ಬೇಕು…
ಹೀಗೆ ಹೇಳುತ್ತಾ ಮೂರು ಮಕ್ಕಳ ತಾಯಿಯೊಬ್ಬರು ಬಾಯ್‌ಫ್ರೆಂಡ್ ಮನೆಗೆ ಲಗೇಜ್ ಸಮೇತ ಬಂದಿಳಿದಿದ್ದಾರೆ. ಉತ್ತರ ಪ್ರದೇಶದ ಸೋನ್ಭದ್ರಾದಲ್ಲಿ ಈ ಘಟನೆ ನಡೆದಿದ್ದು, ವಿಭಾ ಎಂಬಾಕೆ ತನ್ನ ಗಂಡನ ಮನೆಯನ್ನು ತೊರೆದು ಪ್ರಿಯಕರ ಸಂದೀಪ್ ಎಂಬಾತನ ಮನೆಗೆ ಹೋಗಿದ್ದಾಳೆ. ವಧುವಿನ ಉಡುಪಿ ಧರಿಸಿ ಪ್ರಿಯಕರನ ಮನೆಯೆದುರು ಪ್ರತ್ಯಕ್ಷವಾಗಿದ್ದಾಳೆ. ವಿಭಾ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಸಿಂಧೂರದೊಂದಿಗೆ ಆಗಮಿಸಿ ತನ್ನ ಮದುವೆಯಾಗುವಂತೆ ಪ್ರಿಯಕರನ ಬಳಿ ಕೇಳಿದ್ದಾಳೆ. ಮಕ್ಕಳು, ಗಂಡನನ್ನು ತೊರೆದು ಸಂದೀಪ್ ಮನೆ ಸೇರಿದ್ದಾಳೆ.
ಇನ್ನು ಸಂದೀಪ್ 9 ವರ್ಷದಿಂದ ಆಕೆಯ ಖಾಸಗಿ ವಿಡಿಯೋಗಳನ್ನ ಪತಿ ಮತ್ತು ಸಹೋದರನಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದನಂತೆ. ಇದರಿಂದ ಬೇಸತ್ತಿದ್ದ ಆಕೆ ತನ್ನ ಗಂಡ ಮತ್ತು 3 ಜನ ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ್ದಾಳೆ. ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದಾಳೆ.