ನನ್ನೇ ಕಟ್ಕೋಬೇಕು, ಗಂಡ ಮಕ್ಕಳನ್ನು ಬಿಟ್ಟು ಬಂದಿದಿನಿ.. ಬಾಯ್‌ಫ್ರೆಂಡ್‌ ಮನೆಗೆ ಲಗೇಜ್‌ ಸಮೇತ ಬಂದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ಲೀಸ್‌ ಮನೆ, ಮಕ್ಕಳು, ಗಂಡ ಎಲ್ಲಾನೂ ಬಿಟ್ಟು ಬಂದಿದಿನಿ, ನೀನೇ ನನ್ನ ಮದ್ವೆ ಆಗ್ಬೇಕು…

ಹೀಗೆ ಹೇಳುತ್ತಾ ಮೂರು ಮಕ್ಕಳ ತಾಯಿಯೊಬ್ಬರು ಬಾಯ್‌ಫ್ರೆಂಡ್‌ ಮನೆಗೆ ಲಗೇಜ್‌ ಸಮೇತ ಬಂದಿಳಿದಿದ್ದಾರೆ. ಉತ್ತರ ಪ್ರದೇಶದ ಸೋನ್​ಭದ್ರಾದಲ್ಲಿ ಈ ಘಟನೆ ನಡೆದಿದ್ದು,  ವಿಭಾ ಎಂಬಾಕೆ ತನ್ನ ಗಂಡನ ಮನೆಯನ್ನು ತೊರೆದು ಪ್ರಿಯಕರ ಸಂದೀಪ್​ ಎಂಬಾತನ ಮನೆಗೆ ಹೋಗಿದ್ದಾಳೆ. ವಧುವಿನ ಉಡುಪಿ ಧರಿಸಿ ಪ್ರಿಯಕರನ ಮನೆಯೆದುರು ಪ್ರತ್ಯಕ್ಷವಾಗಿದ್ದಾಳೆ. ವಿಭಾ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಸಿಂಧೂರದೊಂದಿಗೆ ಆಗಮಿಸಿ ತನ್ನ ಮದುವೆಯಾಗುವಂತೆ ಪ್ರಿಯಕರನ ಬಳಿ ಕೇಳಿದ್ದಾಳೆ. ಮಕ್ಕಳು, ಗಂಡನನ್ನು ತೊರೆದು ಸಂದೀಪ್ ಮನೆ ಸೇರಿದ್ದಾಳೆ.

ಇನ್ನು ಸಂದೀಪ್​ 9 ವರ್ಷದಿಂದ ಆಕೆಯ ಖಾಸಗಿ ವಿಡಿಯೋಗಳನ್ನ ಪತಿ ಮತ್ತು ಸಹೋದರನಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದನಂತೆ. ಇದರಿಂದ ಬೇಸತ್ತಿದ್ದ ಆಕೆ ತನ್ನ ಗಂಡ ಮತ್ತು 3 ಜನ ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ್ದಾಳೆ. ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!