ವಿಶ್ವಕಪ್ ನೋಡುವ ಆಸೆಯಿತ್ತು, ಆದರೆ ನನಗೆ ಆಹ್ವಾನವೇ ಬರಲಿಲ್ಲ: ಕಪಿಲ್ ದೇವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ನನಗೆ ಆಹ್ವಾನವೇ ಬಂದಿಲ್ಲ ಎಂದು ಕಪಿಲ್ ದೇವ್ ಗಂಭೀರ ಆರೋಪ ಮಾಡಿದ್ದಾರೆ.

ವಿಶ್ವಕಪ್ ಗೆದ್ದ ಎಲ್ಲಾ ನಾಯಕರನ್ನೂ ಆಹ್ವಾನ ಮಾಡಿರುವುದಾಗಿ ವರದಿಯಾಗಿದೆ ಆದರೆ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಯಾರೂ ಕರೆದಿಲ್ಲ ಹಾಗಾಗಿ ಗುಜರಾತ್‌ಗೆ ತೆರಳಿಲ್ಲ.

83 Special: Meet the Heroes of India's 1983 World Cup win - Kapil Dev |  Cricket News – India TV ನಾನು 1983ಯಲ್ಲಿ ವಿಶ್ವಕಪ್ ಗೆದ್ದ ನಮ್ಮ ತಂಡದೊಂದಿಗೆ ಫೈನಲ್ಸ್ ನೋಡುವ ಆಸೆ ಇಟ್ಟುಕೊಂಡಿದ್ದೆ. ಆದರೆ ಆಹ್ವಾನವೇ ಬರಲಿಲ್ಲ. ಇರಲಿ ಪರವಾಗಿಲ್ಲ ದೊಡ್ಡ ಕಾರ್ಯಕ್ರಮದಲ್ಲಿ ಬೇರೆಯವರಿಗೆ ಆಹ್ವಾನ ನೀಡುವಾಗ ನಮ್ಮನ್ನು ಮರೆತಿರಬಹುದು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!