ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಹಲವರಿಗೆ ಟೀ, ಕಾಫಿಯ ಅಭ್ಯಾಸವಿರುತ್ತದೆ..ಚಳಿಗಾಲದಲ್ಲಿ ಮುಂಜಾನೆಯೇ ಬಿಸಿಬಿಸಿ ಚಹಾ ಅಥವಾ ಕಾಫಿ ಬೇಕೇಬೇಕು. ಸಕ್ಕರೆ ಬದಲು ಬೆಲ್ಲವನ್ನು ಟೀ ಅಥವಾ ಕಾಫಿಯಲ್ಲಿ ಸೇರಿಸಿದರೆ ಅದೆಷ್ಟೋ ಆರೋಗ್ಯ ಲಾಭಗಳನ್ನು ಪಡೆಯಬಹುದು. ಕಾರಣ ಚಳಿಗಾಲದಲ್ಲಿ ರೋಗಗಳು ಬೇಗ ಹರಡುವ ಸಾಧ್ಯತೆ ಹೆಚ್ಚು..ದೇಹದಲ್ಲಿ ರೋಗನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಶೀತ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಅದರಂತೆ ನೀವು ಬೆಳಗ್ಗೆ ಕುಡಿಯುವ ಟೀ ಅಥವಾ ಕಾಫಿ ಸಹ ಆರೋಗ್ಯಕ್ಕೆ ಲಾಭದಾಯಕವಾಗಿರಬೇಕು.
ಶೀತ ಕಾಲದಲ್ಲಿ ಬೆಲ್ಲದ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವುದರಿಂದ, ಜೀರ್ಣಕ್ರಿಯೆಯು ಹೆಚ್ಚಾಗುತ್ತದೆ. ಇದು ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಶೀತ ಋತುವಿನಲ್ಲಿ ತೂಕ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚು. ಇದಲ್ಲದೇ ತೂಕ ಇಳಿಸಿಕೊಳ್ಳಲು ಬಯಸುವವರು ಶೀತ ಋತುವಿನಲ್ಲಿ ತೂಕ ಇಳಿಸುವ ಆಹಾರಗಳನ್ನು ಸೇವಿಸಬೇಕು. ಬೆಲ್ಲದ ಚಹಾ ಕೊಬ್ಬನ್ನು ಕರಗಿಸುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ..
ಚಳಿಗಾಲದಲ್ಲಿ ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದೇಹ ಸದೃಢವಾಗುತ್ತದೆ.
ವಿಶೇಷವಾಗಿ ಮಹಿಳೆಯರಲ್ಲಿ ಮುಟ್ಟಿನ ನೋವನ್ನು ಬೆಲ್ಲದ ಚಹಾದಿಂದ ಕಡಿಮೆ ಮಾಡಬಹುದು. ಬೆಲ್ಲದ ಚಹಾ ಋತುಚಕ್ರದ ನೋವನ್ನು ಕಡಿಮೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.