ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಇಂದು (ಡಿ.17) ಪವಿತ್ರಾ ಗೌಡ ಬಿಡುಗಡೆಯಾಗಿದ್ದಾರೆ. ಈ ಬೆನ್ನಲ್ಲೇ ನಟಿಯ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, ಪವಿತ್ರಾಗೆ ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ ಎಂದು ಮಾತನಾಡಿದ್ದಾರೆ.
ಪವಿತ್ರಾಗೆ ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ. ಆ ದೇವರು ನನ್ನ ಮಾತು ಕೇಳಿದರು. ಈ ಕೇಸ್ ಮುಗಿದು ಹೋದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲಿಂದಲೂ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಇನೋಸೆಂಟ್ ಆಕೆ ತಪ್ಪು ಮಾಡಿಲ್ಲ. ಆಕೆ ಬಹಳ ಮಹತ್ವಾಕಾಂಕ್ಷೆ ಇರುವವಳು ಎಂದಿದ್ದಾರೆ.