ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ ಫೋಗಟ್ ಅನಿರೀಕ್ಷಿತವಾಗಿ ಅನರ್ಹಗೊಂಡಿದ್ದು, ಬಳಿಕ ಕುಸ್ತಿಗೆ ಗುಡ್ಬೈ ಹೇಳಿದ್ದಾರೆ. ಈ ವೇಳೆ ಇಡೀ ದೇಶ ಆಕೆಯ ಬೆಂಬಲಕ್ಕೆ ನಿಂತಿದೆ.
ಅದೇ ರೀತಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಪಾನಿನ ರೇ ಹಿಗುಚಿ, ವಿನೇಶ್‌ಗೆ ಸಾಂತ್ವನ ಹೇಳಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೋಗಟ್ ಅವರ ನಿವೃತ್ತಿಗೆ ಹಿಗುಚಿ ಪ್ರತಿಕ್ರಿಯಿಸಿದ್ದಾರೆ.
ಪದಕ ಕೈತಪ್ಪಿದ್ದಕ್ಕೆ ಚಿಂತಿಸಬೇಡ ಜೀವನ ಮುಂದುವರಿಯುತ್ತದೆ. ನಾನೂ ಸಹ ಹಿನ್ನಡೆಯಿಂದ ಕಲಿತು ಬೆಳೆದಿದ್ದೇನೆ. ಪ್ರಯಾಣವು ಅತ್ಯಂತ ಸುಂದರವಾಗಿರುತ್ತದೆ. ಚೆನ್ನಾಗಿ ವಿಶ್ರಾಂತಿ ಪಡೆಯಿರಿ ಎಂದು ಸಮಾಧಾನಪಡಿಸಿದ್ದಾರೆ.
2016 ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಹಿಗುಚಿ, 2020 ರಲ್ಲಿ ತಮ್ಮದೇ ದೇಶದಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ 50 ಗ್ರಾಂ ಅಧಿಕ ತೂಕದ ಕಾರಣ ವಿಶ್ವ ಕ್ರೀಡಾಕೂಟದಿಂದ ಅನರ್ಹಗೊಂಡರು. ಇದರಿಂದ ಪಾಠಕಲಿತ ಅವರು ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಿಂಚಿದರು. ಅವರು ಸೆಮಿಸ್‌ನಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು. ಅಂತಿಮ ಹೋರಾಟದಲ್ಲಿ ಅಮೆರಿಕದ ಕುಸ್ತಿಪಟು ವಿರುದ್ಧ ಗೆದ್ದು ಚಿನ್ನದ ಪದಕಕ್ಕೆ ಪಾತ್ರರಾದರು.