Thursday, March 23, 2023

Latest Posts

BOLLYWOOD | ಈ 3 ಹಿಟ್ ಸಿನಿಮಾಗಳಲ್ಲಿ ನಾನು ಆಕ್ಟಿಂಗ್ ಮಾಡಬೇಕಿತ್ತು, ಆಸೆ ಹಂಚಿಕೊಂಡ ರಣ್‌ಬೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲ ನಟರಿಗೂ ತಮ್ಮ ಸಿನಿಮಾ ಎಷ್ಟೇ ಹಿಟ್ ಆದ್ರೂ ಇನ್ನೊಬ್ಬರ ಸಿನಿಮಾ ನೋಡಿದಾಗ ಇಂಥ ಅದ್ಭುತ ಪಾತ್ರ ನಾನು ಮಾಡಬೇಕಿತ್ತು ಎನ್ನುವ ಆಸೆ ಇದ್ದೇ ಇರುತ್ತದೆ.

ಇದೇ ರೀತಿ ಆಸೆಯೊಂದನ್ನು ಬ್ರಹ್ಮಾಸ್ತ್ರ ನಟ ರಣ್‌ಬೀರ್ ವ್ಯಕ್ತಪಡಿಸಿದ್ದಾರೆ. ಈ ಮೂರು ಸಿನಿಮಾಗಳನ್ನು ನಾನು ಇಷ್ಟಪಟ್ಟಿದ್ದೇನೆ, ಇದರಲ್ಲಿ ನಾನು ನಟಿಸಬಾರದಿತ್ತಾ ಎಂದು ನನಗೆ ಅನಿಸಿದೆ ಎಂದಿದ್ದಾರೆ.

ಅಂದಹಾಗೆ ಈ ಮೂರು ಸಿನಿಮಾಗಳು, ಅಲ್ಲು ಅರ್ಜುನ್ ನಟನೆಯ ಪುಷ್ಪ, ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಾಥಿಯಾವಾಡಿ ಹಾಗೂ ಆರ್‌ಆರ್‌ಆರ್ ಎಂದಿದ್ದಾರೆ.

ಇದೀಗ ರಣ್‌ಬೀರ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿವೆ, ಸದ್ಯದಲ್ಲೇ ತೂ ಜೂಟಿ ಮೇ ಮಕ್ಕಾರ್ ಸಿನಿಮಾ ತೆರಕಾಣಲಿದೆ, ಇನ್ನು ಅನಿಮಲ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ, ಇದಾದ ನಂತರ ಬ್ರಹ್ಮಾಸ್ತ್ರ ಪಾರ್ಟ್-೨ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!