ಕ್ರಿಪ್ಟೋ ಕರೆನ್ಸಿ ಪರಿಗಣನೆಗೆ ಕ್ರಿಯಾ ಯೋಜನೆ ಹೊರತಂದ ಐಎಂಎಫ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಪೂರ್ವ ಕಾಲಘಟ್ಟದಲ್ಲಿ ಭಾರೀ ಚರ್ಚೆಯಲ್ಲಿದ್ದ ಕ್ರಿಪ್ಟೋ ಕೋವಿಡ್‌ ನಂತರ ನೆಲಕ್ಕೆ ಕುಸಿದಿದೆ. ಕ್ರಿಪ್ಟೋ ಕರೆನ್ಸಿಗಳನ್ನು ಕಾನೂನು ಬದ್ಧಗೊಳಿಸುವ ಕುರಿತು ಅನೇಕ ದೇಶಗಳಲ್ಲಿ ಚರ್ಚೆಯಾಗುತ್ತಿರುವಾಗ ಇದೀಗ ಅಂತರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್‌ ಕ್ರಿಪ್ಟೋ ಪರಿಗಣನೆಯ ಕುರಿತು ಕ್ರಿಯಾಯೋಜನೆಯೊಂದನ್ನು ಹೊರತಂದಿದ್ದು 9 ಅಂಶಗಳನ್ನು ವಿವರಿಸಿದೆ. ಜೊತೆಗೆ ಮೊದಲನೇ ಅಂಶವಾಗಿ ಕ್ರಿಪ್ಟೋ ಕರೆನ್ಸಿಗಳಿಗೆ ಲೀಗಲ್‌ ಟೆಂಡರ್‌ ಸ್ಥಿತಿಯನ್ನು ನೀಡಬಾರದು ಎಂದು ಉಲ್ಲೇಖಿಸಿದೆ.

ಕ್ರಿಪ್ಟೋ ಕರೆನ್ಸಿಗಳನ್ನು ರಾಷ್ಟ್ರಗಳು ಯಾವ ರೀತಿ ಪರಿಗಣಿಸಬೇಕು ಎಂಬ ಕುರಿತು ಐಎಂಎಫ್‌ ಮಾರ್ಗದರ್ಶನ ನೀಡಲಿದೆ. ಈ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದ್ದು “ವಿತ್ತೀಯ ನೀತಿಯ ಚೌಕಟ್ಟುಗಳನ್ನು ಬಲಪಡಿಸುವ ಮೂಲಕ ವಿತ್ತೀಯ ಸಾರ್ವಭೌಮತ್ವ ಮತ್ತು ಸ್ಥಿರತೆಯನ್ನು ಕಾಪಾಡುವ ಸಲುವಾಗಿ ಕ್ರಿಪ್ಟೋ ಸ್ವತ್ತುಗಳಿಗೆ ಅಧಿಕೃತ ಕರೆನ್ಸಿ ಅಥವಾ ಕಾನೂನು ಮಾನ್ಯತೆ ನೀಡಬಾರದು” ಎಂದು ಶಿಫಾರಸ್ಸು ಮಾಡಿದೆ.

ಜೊತೆಗೆ 2021ರಲ್ಲಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿದ ಎಲ್‌ಸಾಲ್ವಡೋರ್‌ ದೇಶದ ನಡೆಯನ್ನು ಐಎಂಎಫ್‌ ಖಂಡಿಸಿದ್ದು ಕ್ರಿಪ್ಟೋ ಬಂಡವಾಳ ಹರಿವು, ಕ್ರಿಪ್ಟೋ ಆಸ್ತಿಗಳ ಮೇಲೆ ತೆರಿಗೆ ಹೇರಿಕೆ, ಕ್ರಿಪ್ಟೋ ಮಾರುಕಟ್ಟೆಯ ಪ್ರವರ್ತಕರ ಮೇಲ್ವಿಚಾರಣೆ ಇತ್ಯಾದಿಗಳ ಕುರಿತಾಗಿಯೂ ಐಎಂಎಪ್‌ ತನ್ನ ಕ್ರಿಯಾಯೋಜನೆಯಲ್ಲಿ ಸಲಹೆಗಳನ್ನು ನೀಡಿದೆ.

ಕ್ರಿಪ್ಟೋ ಕರೆನ್ಸಿಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲು ಮತ್ತು ನಿಯಮಗಳನ್ನು ಜಾರಿಗೊಳಿಸಲು ದೇಶಗಳು ಅಂತರರಾಷ್ಟ್ರೀಯ ವ್ಯವಸ್ಥೆಗಳನ್ನು ಸ್ಥಾಪಿಸಬೇಕುಹಾಗೆಯೇ ಜಾಗತಿಕ ವಿತ್ತೀಯ ವ್ಯವಸ್ಥೆಯ ಸ್ಥಿರತೆಯ ಮೇಲೆ ಕ್ರಿಪ್ಟೋದ ಪ್ರಭಾವವನ್ನು ಮೇಲ್ವಿಚಾರಣೆ ಮಾಡುವ ಮಾರ್ಗಗಳನ್ನುಜೋಡಿಸಬೇಕು ಎಂದು ಐಎಂಎಫ್‌ ಹೇಳಿದೆ. ಕ್ರಿಪ್ಟೋಕರೆನ್ಸಿಗೆ ಕಾನೂನು ಮಾನ್ಯತೆ ನೀಡುವುದು ಹಣಕಾಸು ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಎಂಬುದನ್ನು ಐಎಂಎಫ್‌ ನಿರ್ದೇಶಕರೂ ಒಪ್ಪಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!