ಹೊಸದಿಗಂತ ವರದಿ ವಿಜಯಪುರ:
ಪಾಕಿಸ್ತಾನ ದರಿದ್ರ ದೇಶ. ಪಾಕಿಸ್ತಾನದ ಉಗ್ರರ ತಾಣದ ಮೇಲೆ ಭಾರತ ದಾಳಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಗ್ರರನ್ನು ನಾವು ಬಗ್ಗು ಬಡಿಯಬೇಕು. ಮುಗ್ದರ ಹತ್ಯೆಗಾಗಿ ನಾವು ಸೇಡು ತಿರಿಸಿಕೊಳ್ಳಬೇಕು ಎಂದರು.
ಉಗ್ರರು, ಮುಗ್ದರ ಮೇಲೆ ಹತ್ಯೆ ಮಾಡಿದ್ದು ಹೇಯ, ಹೇಡಿತನದ ಕೃತ್ಯ ಆಗಿದೆ. ಹೀಗಾಗಿ ನಾವು ಸೇಡು ತಿರಿಸಿಕೊಳ್ಳಬೇಕು. ಭಾರತ ದೇಶ ಒಗ್ಗಟ್ಟಿನಿಂದ ಇದೆ. ಇದರಲ್ಲಿ ಯಾವುದೇ ಪಕ್ಷ ಬರುವುದಿಲ್ಲ. ದೇಶ ಮೊದಲು ನಂತರ ಪಕ್ಷ ಎಂದರು.