Tuesday, March 28, 2023

Latest Posts

ರಾಮನಗರದಲ್ಲಿ ರಾಮಮಂದಿರ ನಾನೇ ಕಟ್ಟುತ್ತೇನೆ: ಬಹಿರಂಗವಾಗಿಯೇ ಮುಂದಿನ ಸಿಎಂ ನಾನೇ ಎಂದ ಕುಮಾರಸ್ವಾಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಮನಗರದಲ್ಲಿ ರಾಮಮಂದಿರ ನೀರ್ಮಾಣದ ಬಗ್ಗೆ ಬಜೆಟ್ ನಲ್ಲಿ ಅವರು ಘೋಷಣೆ ಮಾಡಿದ್ರೂ ಅದನ್ನ ನಾನೇ ಮಾಡಬೇಕು. ಅವರ ಕೈಯಲ್ಲಿ ಮಾಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ನೆನಪಾಗಿದೆ. ಈ ಬಗ್ಗೆ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬಹುಶಃ ಈ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ನನ್ನ ಮೇಲೆ ಬರಲಿದೆ. ಏಕೆಂದರೆ ಮುಂದೆ ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಬಹಿರಂಗವಾಗಿಯೇ ಹೇಳಿದ್ದಾರೆ.

ಮಂದಿರ ನಿರ್ಮಾಣದ ಬಗ್ಗೆ ಇವತ್ತು ಘೋಷಣೆ ಮಾಡಿದ್ದಾರೆ. ನಾಳೆ ಬೆಳಗ್ಗೆ ಕಟ್ಟಲು ಇವರಿಂದ ಸಾದ್ಯವಿಲ್ಲ. ಮುಂದಿನ ಸರ್ಕಾರ ಬಂದ ಮೇಲೆ ಕಾಮಗಾರಿ ಆಗಬೇಕು, ಮುಂದಿನ ಸರ್ಕಾರ ಬಿಜೆಪಿ ಬರಲ್ಲ. ಮುಂದಿನ ಸರ್ಕಾರ ನನ್ನ ನೇತೃತ್ವದಲ್ಲಿ ಇರಲಿದೆ. ಅವರ ಆಸೆಯನ್ನು ನಾನೇ ನೆರವೇರಿಸುತ್ತೇನೆ ಎಂದರು.

ಚುನಾವಣೆ ಸಮೀಪದಲ್ಲಿ ಘೋಷಣೆ ಮಾಡಿ ಏನು ಮಾಡಲು ಸಾಧ್ಯ. ಇದಕ್ಕಾಗಿ ದುಡ್ಡು ಎಷ್ಟು ಇಟ್ಟಿದ್ದಾರೆ? ಜಾಗದ ಅನುಮತಿ ಸಿಕ್ಕಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಮಂದಿರ ನಿರ್ಮಾಣ ವಿಚಾರದಲ್ಲಿ ಕೆಲವೊಂದು ಕಾನೂನು ಇದೆ, ಅದನೆಲ್ಲ ನಾನೇ ಮಾಡಬೇಕು. ರಾಮಮಂದಿರ ನಾನೇ ಕಟ್ಟುತ್ತೇನೆ. ಅವರು ಯಾಕೆ ಶ್ರಮ ತೆಗೆದುಕೊಳ್ಳುತ್ತಾರೆ. ಪ್ರಚಾರಕ್ಕಾಗಿ ಬಿಜೆಪಿ ಅವರು ಮಾಡಿಕೊಂಡಿದ್ದಾರೆ. ಸುಳ್ಳು ಪ್ರಚಾರ ಅವರ ಜಯಾಮಾನವಾಗಿದೆ. ಮಂದಿರ ನಿರ್ಣಯಕ್ಕೆ ಬಜೆಟ್​​ನಲ್ಲಿ ಎಷ್ಟು ಹಣ ಇಟ್ಟಿದ್ದಾರೆ? ಈ ರೀತಿಯ ಘೋಷಣೆಯಿಂದ ಜೆಡಿಎಸ್ ಕಟ್ಟಿಹಾಕಲು ಸಾಧ್ಯವಿಲ್ಲ. ಘೋಷಣೆಯಿಂದ ಜನ ವೋಟ್ ಹಾಕಲ್ಲ. ಮೂರು ವರ್ಷದಲ್ಲಿ ರಾಮನಗರಕ್ಕೆ ಬಿಜೆಪಿ ಕೊಡುಗೆ ಏನು? ಭಾಷಣ ಮಾಡುತ್ತಾರೆ ಅಷ್ಟೇ ಎಂದರು.

ಸಿದ್ದರಾಮಯ್ಯ ಕಾಲದಲ್ಲಿ ಚುನಾವಣೆ ಸಂದರ್ಭದಲ್ಲಿ ಬಹಳಷ್ಟು ಶಂಕುಸ್ಥಾಪನೆ ಆಗಿತ್ತು. ಆದರೆ ಅದು ಟೇಕಾಫ್ ಆದವಾ? ಅಂತಿಮವಾಗಿ ಅಲ್ಲಿ ರಾಮಮಂದಿರವನ್ನ ಕೂಡ ಕುಮಾರಸ್ವಾಮಿನೇ ಕಟ್ಟಬೇಕು. ಇವರ ಕೈಯಲ್ಲಿ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!