Friday, March 31, 2023

Latest Posts

ಸಿಎಂ ಯೋಗಿ ಸರಕಾರದಿಂದ ಪರೀಕ್ಷೆಯಲ್ಲಿ ನಕಲು ತಡೆಗೆ ಕಠಿಣ ಕ್ರಮ: 4 ಲಕ್ಷ ವಿದ್ಯಾರ್ಥಿಗಳು ಗೈರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶದಲ್ಲಿ ಈ ಬಾರಿಯ 10 ಹಾಗೂ 12 ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ (UP Board Exam 2023) ನಕಲು ತಡೆಗೆ ಯೋಗಿ ಆದಿತ್ಯನಾಥ್‌ ಸರ್ಕಾರವು ಕಠಿಣ ಕ್ರಮ ತೆಗೆದುಕೊಂಡಿದೆ .
ಇದರಿಂದ 10 ಹಾಗೂ 12 ನೇ ತರಗತಿಯ ಒಟ್ಟು 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮೊದಲ ದಿನವೇ ಗೈರಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಬೋರ್ಡ್‌ ಎಕ್ಸಾಂ ಶುಕ್ರವಾರ ಆರಂಭವಾಗಿದ್ದು, ಪರೀಕ್ಷೆಗೆ ನೋಂದಣಿ ಮಾಡಿಕೊಂಡ 31 ಲಕ್ಷಕ್ಕೂ ಅಧಿಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ 2.18 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಾಗೆಯೇ, ದ್ವಿತೀಯ ಪಿಯುಸಿಯ 25.80 ಲಕ್ಷ ವಿದ್ಯಾರ್ಥಿಗಳಲ್ಲಿ 1.83 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಇದಕ್ಕೆ ಕಾರಣ ನಕಲು ತಡೆಗೆ ಕಠಿಣ ಕ್ರಮ ಎಂದು ಹೇಳಲಾಗುತ್ತಿದೆ.

ವಾರ್ಷಿಕ ಪರೀಕ್ಷೆಗಳಲ್ಲಿ ನಕಲು ತಡೆಗೆ ಹತ್ತಾರು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ 75 ಜಿಲ್ಲೆಗಳ 8,753  ಪರೀಕ್ಷಾ ಕೇಂದ್ರಗಳ 1.43 ಪರೀಕ್ಷಾ ಕೊಠಡಿಗಳಲ್ಲಿ ವಾಯ್ಸ್‌ ರೆಕಾರ್ಡರ್‌ ಸಹಿತ 3 ಲಕ್ಷ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳ ತಪಾಸಣೆ, ವಿದ್ಯುನ್ಮಾನ ಡಿವೈಸ್‌ಗಳ ಬಳಕೆ ನಿಷೇಧ ಸೇರಿ ಹತ್ತಾರು ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಹೆದರಿ ವಿದ್ಯಾರ್ಥಿಗಳು ಪರೀಕ್ಷೆಗೆ ಚಕ್ಕರ್‌ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!