ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಓಪನರ್ ಶುಭಮನ್ ಗಿಲ್ ಅಗ್ರ ಸ್ಥಾನಕ್ಕೇರಿದ್ದಾರೆ.ಮತ್ತೊಂದೆಡೆ, ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಮತ್ತೆ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ.
ಪಾಕ್ ನಾಯಕ 824 ರೇಟಿಂಗ್ನಿಂದ ಬಾಬರ್ ಅಜಮ್ ಕುಸಿತ ಅನುಭವಿಸಿದರು.
ಗಿಲ್ ಜ್ವರದ ಕಾರಣ ಮೊದಲೆರಡು ವಿಶ್ವಕಪ್ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ನಂತರ ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಎಡವಿದರು. ಬಾಂಗ್ಲಾದೇಶದ ವಿರುದ್ಧ 53, ಶ್ರೀಲಂಕಾ ವಿರುದ್ಧ 92, ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ 23 ರನ್ ಗಳಿಸಿದ್ದು, ಅವರ ಶ್ರೇಯಾಂಕದ ಏರಿಕೆಗೆ ಕಾರಣವಾಗಿದೆ. ವಿಶ್ವಕಪ್ನಲ್ಲಿ ಒಟ್ಟಾರೆ ಅವರೀಗ 219 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಶ್ರೇಯಾಂಕವೂ ಏರಿಕೆ ಕಂಡಿದೆ. ವಿರಾಟ್ 4ನೇ ಸ್ಥಾನಕ್ಕೆ, ರೋಹಿತ್ 6ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ನಂ.1 ಸ್ಥಾನ ಸ್ಪರ್ಧೆಯಲ್ಲಿ ಈ ಅನುಭವಿಗಳು ಇದ್ದಾರೆ. ವಿರಾಟ್ ಗಿಲ್ ಅವರಿಗಿಂತ 60 ರೇಟಿಂಗ್ ಹಿಂದಿದ್ದಾರೆ ಅಷ್ಟೇ. ಉಳಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 18ನೇ ಸ್ಥಾನ ಅಲಂಕರಿಸಿದರೆ, ಕೆ ಎಲ್ ರಾಹುಲ್ 26ನೇ ಶ್ರೇಯಾಂಕಕ್ಕೆ ಏರಿಕೆ ಕಂಡಿದ್ದಾರೆ.
ಸಿರಾಜ್ಗೆ ಮತ್ತೆ ಅಗ್ರ ಪಟ್ಟ:
ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾವನ್ನು 50 ರನ್ಗೆ ಕಟ್ಟಿಹಾಕಿದ ಮೊಹಮ್ಮದ್ ಸಿರಾಜ್ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದರು. ನಂತರ ಆಸ್ಟ್ರೇಲಿಯಾ, ಪಾಕ್ ಬೌಲರ್ಗಳು ಏರಿಕೆ ಕಂಡಿದ್ದರು. ವಿಶ್ವಕಪ್ನ ಲೀಗ್ ಹಂತದ ಪಂದ್ಯದಲ್ಲಿ ಲಂಕಾ ವಿರುದ್ಧ ಮತ್ತೆ ವಿದ್ವಂಸಕ ಬೌಲಿಂಗ್ ಮಾಡಿದ ಸಿರಾಜ್ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದಾರೆ. ಇನ್ನು ಕುಲ್ದೀಪ್ ಯಾದವ್ (4), ಜಸ್ಪ್ರೀತ್ ಬುಮ್ರಾ (8), ಮೊಹಮ್ಮದ್ ಶಮಿ (10) ಪಟ್ಟಿಯಲ್ಲಿ ಟಾಪ್ 10ರ ಒಳಗೆ ಇದ್ದಾರೆ. ಜಡೇಜಾ ಬೌಲಿಂಗ್ನಲ್ಲಿ 19ನೇ ಸ್ಥಾನದಲ್ಲಿದ್ದರೆ, ಆಲ್ರೌಂಡರ್ ವಿಭಾಗದಲ್ಲಿ 10ನೇ ಸ್ಥಾನದಲ್ಲಿದ್ದಾರೆ.