ICC ODI Ranking: ಮೊದಲ ಸ್ಥಾನದಲ್ಲಿ ಗಿಲ್, ಕೊಹ್ಲಿಗೆ ಭಡ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ಐಸಿಸಿ ಏಕದಿನ(ICC ODI Rankings) ಬ್ಯಾಟಿಂಗ್​ ಮತ್ತು ಬೌಲಿಂಗ್​ ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾ ಆಟಗಾರರು ಪಾರುಪತ್ಯ ಮೆರೆದಿದ್ದಾರೆ.

ಶುಭಮನ್​ ಗಿಲ್(Shubman Gill)​ ಅವರು ಅಗ್ರಸ್ಥಾನದಲ್ಲಿದ್ದರೆ, ವಿರಾಟ್​ ಕೊಹ್ಲಿ(Virat Kohli) ಮತ್ತು ರೋಹಿತ್​ ಶರ್ಮ(Rohit Sharma) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರು ತವರಿನಲ್ಲಿ ನಡೆದ ವಿಶ್ವಕಪ್ ಅಭಿಯಾನದಲ್ಲಿ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶಿಸಿ ಒಟ್ಟು 11 ಪಂದ್ಯಗಳನ್ನು ಆಡಿ 765 ರನ್​ ಬಾರಿಸಿದ್ದರು. ಜತೆಗೆ ಟೂರ್ನಿಯಲ್ಲಿ ಅತ್ಯಧಿಕ ಮೊತ್ತ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಅವರ ಬ್ಯಾಟಿಂಗ್​ ಸಾಧನೆಯಿಂದಾಗಿ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದೆ. ಸದ್ಯ 791 ರೇಟಿಂಗ್​ ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ .

ಬಾಬರ್​ ಅಜಂ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಶುಭಮನ್​ ಗಿಲ್​ ಅವರ ಈ ಸ್ಥಾನ ಸದ್ಯಕ್ಕೆ ಭದ್ರವಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ರೇಟಿಂಗ್​ ಅಂಕದಲ್ಲಿ ಕುಸಿತ ಕಂಡಿದ್ದಾರೆ. ಇದಕ್ಕೆ ಕಾರಣ ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಅವರು ಅನುಭವಿಸಿದ ಬ್ಯಾಟಿಂಗ್​ ವೈಫಲ್ಯ. ಫೈನಲ್​ನಲ್ಲಿ ಗಿಲ್​ ಕವಲ 4 ರನ್​ ಗಳಿಸಿದ್ದರು. ಪಾಕ್​ ಮಾಜಿ ನಾಯಕ ಬಾಬರ್​ ಅಜಂ(824 ರೇಟಿಂಗ್​ ಅಂಕ) ದ್ವಿತೀಯ ಸ್ಥಾನದಲ್ಲೇ ಮುಂದುವರಿದ್ದಾರೆ.​

ರೋಹಿತ್​ ಶರ್ಮ ಕೂಡ ನೂತನ ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದು ಮೂರನೇ ಸ್ಥಾನ ಪಡೆದಿದ್ದಾರೆ. ಸದ್ಯ ಅವರ ರೇಟಿಂಗ್​ ಅಂಕ 769. ಕಳೆದ ವಾರ ರೋಹಿತ್​ ಅವರು 760 ರೇಟಿಂಗ್​ ಅಂಕದೊಂದಿಗೆ 5ನೇ ಸ್ಥಾನದಲ್ಲಿದ್ದರು. ವಿರಾಟ್​ ಕೊಹ್ಲಿ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದರು. ಈಗ ಮೂರಕ್ಕೇರಿದ್ದಾರೆ.

ವಿಶ್ವಕಪ್​ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಬೌಲಿಂಗ್​ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದ ಮೊಹಮ್ಮದ್​ ಸಿರಾಜ್​ ಅವರು ಕಳೆದ ವಾರ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನೂತನ ಪಟ್ಟಿಯಲ್ಲಿ ಮತ್ತೆ ಒಂದು ಸ್ಥಾನದ ಕುಸಿತ ಕಂಡು ಮೂರಕ್ಕೆ ಜಾರಿದ್ದಾರೆ. ಸದ್ಯ ಅವರ ರೇಟಿಂಗ್​ ಅಂಕ 699. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಜೋಶ್​ ಹ್ಯಾಜಲ್​​ವುಡ್(703 ರೇಟಿಂಗ್ ಅಂಕ)​ ಈಗ 2ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್​ ಮಹಾರಾಜ್​ 741 ರೇಟಿಂಗ್​ ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ 24 ವಿಕೆಟ್​ ಕಿತ್ತ ಮೊಹಮ್ಮದ್​ ಶಮಿ ಅವರು 10ನೇ ಸ್ಥಾನ ಪಡದಿದ್ದಾರೆ. ಜಸ್​ಪ್ರೀತ್​ ಬುಮ್ರಾ ನಾಲ್ಕನೇ, ಕುಲ್​ದೀಪ್ ಯಾದವ್​ ಅವರು ಅಘಾನಿಸ್ತಾನದ ರಶೀದ್​ ಖಾನ್​ ಅವರೊಂದಿಗೆ ಜಂಟಿ 6ನೇ ಸ್ಥಾನ ಪಡೆದಿದ್ದಾರೆ. ಆಲ್​ರೌಂಡರ್​ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 10ನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!